ಚಾಮರಾಜನಗರ: ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಅವರು ಇಂದು ನಿಧನರಾಗಿದ್ದು, ಅವರಿಗೆ 92 ವರ್ಷ ವಯಸ್ಸಾಗಿತ್ತು.
ಚಾಮರಾಜನಗರ ಜಿಲ್ಲೆಯ ಗಾಜನೂರಿನ ಸ್ವಗ್ರಹದಲ್ಲಿ ವಾಸಿಸುತ್ತಿದ್ದ ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ರಾಜ್ ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದ ಇವರು ತಮ್ಮ 92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿರುವ ವಿಚಾರ ನಾಗಮ್ಮನವರಿಗೆ ತಿಳಿದಿರಲಿಲ್ಲ, ಕಂದಾ ಒಮ್ಮೆ ನನ್ನನ್ನು ಬಂದು ನೋಡಿಕೊಂಡು ಹೋಗು ಅಂತ ಅವರು ಈ ಹಿಂದೆ ಹೇಳಿದ್ದರು. ಆ ವಿಚಾರ ಎಲ್ಲರ ಹೃದಯ ಕರಗಿಸಿತ್ತು. ತಮ್ಮ ಕೊನೆಯ ದಿನದವರೆಗೂ ಅವರು ಅಪ್ಪು ಇಲ್ಲ ಎನ್ನುವ ಸತ್ಯವನ್ನು ತಿಳಿಯಲು ಸಾಧ್ಯವಾಗಲಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC