ಡಾ. ರಾಜ್’ಕುಮಾರ್ ತಮ್ಮ ಸಿನಿಮಾಗಳಲ್ಲಿ ಸಿಗರೇಟು, ಮದ್ಯ ಇವುಗಳನ್ನು ವಿರೋಧಿಸುತ್ತಲೇ ಡಾ. ರಾಜ್’ಕುಮಾರ್ ರವರು ಸಿನಿಮಾ ಮಾಡಿದವರು. ಹೆಚ್ಚಿನವರಿಗೆ ಇಂದಿಗೂ ಡಾ.ರಾಜ್ ಕುಮಾರ್ ರವರು ಒಂದು ಕಾಲದಲ್ಲಿ ಸಿಗರೇಟು ಸೇದುತ್ತಿದ್ದರು ಅಂದರೆ ಖಂಡಿತ ನಂಬಲಾರರು ಏಕೆಂದರೆ ಅಣ್ಣಾವ್ರು ಸಿಗರೇಟು ಸೇದುತ್ತಿದ್ದ ವಿಷಯ ಎಲ್ಲೂ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ.
ರಾಜ್ ಕುಮಾರ್ ರವರು ಸಿಗರೇಟ್ ಸೇದದೇ ಇರೋದರ ಹಿಂದೆ ಇಷ್ಟೆಲ್ಲಾ ಕಥೆಯಿದ್ದರೂ, ಒಂದು ಕಾಲದಲ್ಲಿ ಅವರು ಸಿಗರೇಟ್ ಸೇದುತ್ತಿದ್ದ ಸಣ್ಣ ಕಥೆಯಿದೆ. ಆಗ ರಾಜ್ ಕುಮಾರ್ ರವರು ದಿನಕ್ಕೆ ಒಂದೋ ಎರಡೋ ಸಿಗರೇಟುಗಳನ್ನು ಸೇದುವ ಚಟವಿತ್ತು. ಅಕಸ್ಮಾತಾಗಿ ಅವರು ಸಿಗರೇಟು ಸೇದುವುದನ್ನು ಕಂಡಾಗ ಅವರ ಅಭಿಮಾನಿಗಳು `ಏನಣ್ಣಾ ನಿಮ್ಮ ಕೈಲಿ ಸಿಗರೇಟ್ ಚೆನ್ನಾಗಿ ಕಾಣಲ್ಲ… ದಯವಿಟ್ಟು ಇದು ಬೇಡಿ’ ಅಂತ ಹೇಳಿದ್ದರು. ಅಂದಿನಿಂದ ರಾಜ್ಕುಮಾರ್ ಯಾರಿಗೂ ಕಾಣದೇ ತಮ್ಮ ಗ್ರೀನ್ ರೂಮ್ನಲ್ಲೋ, ತಮ್ಮ ಖಾಸಗಿ ರೂಮ್ನಲ್ಲೋ ಅಪರೂಪಕ್ಕೆ ಸೇದುತ್ತಿದ್ದರು. ಹೀಗಿರುವಾಗ ಒಂದು ಘಟನೆ ನಡೆಯಿತು.
ಒಮ್ಮೆ ಸೆಟ್ ನಲ್ಲಿ ಯಾರೂ ಇಲ್ಲದ ವೇಳೆ ಮರೆಯಲ್ಲಿ ನಿಂತು ಡಾ.ರಾಜ್‌ಕುಮಾರ್ ಸಿಗರೇಟ್ ಸೇದುತ್ತಿದ್ದರು. ಆಗ ಅಲ್ಲೇ ಕೆಲಸ ಮಾಡುತ್ತಿದ್ದ ಲೈಟ್ ಬಾಯ್ ಡಾ.ರಾಜ್’ಕುಮಾರ್ ಸಿಗರೇಟ್ ಸೇದುತ್ತಿದ್ದನ್ನು ನೋಡಿ ತಮ್ಮ ಮುಖವನ್ನು ಒಂಥರ ಮಾಡಿಕೊಂಡ್ರು.
ಇದನ್ನು ಕಂಡ ರಾಜ್’ಕುಮಾರ್ ಬೇಸರವಾಯ್ತು. ನಮ್ಮನ್ನು ಎಲ್ಲರೂ ಆದರ್ಶವಾಗಿ ನೋಡ್ತಾರೆ. ಅಂಥವರ ಮುಂದೆ ನಾನು ಸಿಗರೇಟ್ ಸೇದಿದರೇ ಯಾವ ಸಂದೇಶ ಕೊಟ್ಟಂತಾಗುತ್ತೆ ಅಂದುಕೊಂಡರು ರಾಜ್. ಅದೇ ಕೊನೆ. ಅದಾದ ಮೇಲೆ ಅಣ್ಣಾವ್ರು ಎಂದಿಗೂ ಸಿಗರೇಟ್ ಸೇದಲಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


