ಬ್ಯಾಲ್ಯ: ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಅಪರಾಧ. ರಸ್ತೆ ಸುರಕ್ಷತೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸ ಬೇಕಾದ್ದು ನಿಮ್ಮ ಕರ್ತವ್ಯ ಎಂದು ಕೊಡಿಗೇನಹಳ್ಳಿ ಪೊಲೀಸ್ ರಾಣಾಧಿಕಾರಿ ಎಸ್.ಜಿ. ಶ್ರೀನಿವಾಸ ಪ್ರಸಾದ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ನಶ ಮುಕ್ತ ತುಮಕೂರು ಅಭಿಯಾನದ ಪ್ರಯುಕ್ತ ಪುರವರ ಪ್ರೌಢಶಾಲೆ, ಕಾಲೇಜು ಮತ್ತು ಕೋಡ್ಲಾಪುರ ಪ್ರೌಢಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಳ್ಳತನಗಳು ಹೆಚ್ಚು. ಚಳಿಗಾಲದಲ್ಲಿ ಜನತೆಗೆ ಉತ್ತಮ ನಿದ್ದೆ ಬರುತ್ತದೆ. ಹೀಗಾಗಿ ಈ ಸಂದರ್ಭಗಳಲ್ಲಿ ಹೆಚ್ಚು ಕಳ್ಳತನಗಳು ನಡೆಯುತ್ತವೆ. ಆದ್ದರಿಂದ ಪೊಲೀಸ್ ಇಲಾಖೆ ಸೂಚಿಸಿರುವ ನಿಯಮಗಳನ್ನು ಪಾಲಿಸುವುದರ ಜೊತೆಗೆ ಅಪರಾಧ ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಇತ್ತೀಚಿಗೆ ಹೆಚ್ಚಾಗುತ್ತಿರುವ ನಶ ಸಾಮಗ್ರಿಗಳ ಬಳಕೆ, ಅದರಿಂದಾಗುವ ದುಷ್ಪರಿಣಾಮಗಳು, ಸಿಗುವ ಶಿಕ್ಷೆ ಮತ್ತು ಪೋಕ್ಸೋ ಕಾಯಿದೆ, ಹೆಣ್ಣು ಮಕ್ಕಳ ಸುರಕ್ಷತೆ, ಬಾಲ್ಯ ವಿವಾಹ ಕುರಿತು ಇರುವ ಕಾಯ್ದೆಗಳು ಮತ್ತು ಶಿಕ್ಷೆಗಳ ಬಗ್ಗೆ ವಿವರ ನೀಡಿದರು. ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು, ಕೊಡಿಗೇನ ಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


