ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯದ ಕಾರಣದಿಂದ ಸಿಡಬ್ಲುಆರ್ ಸಿ ಮತ್ತೆ ರಾಜ್ಯದ ವಿರುದ್ದ ಆದೇಶ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಡಬ್ಲುಆರ್ ತಮಿಳುನಾಡು ನಿಯಮಬಾಹಿರವಾಗಿ ನೀರು ಬಳಕೆ ಮಾಡಿಕೊಂಡಿರುವುದನ್ನು, ಕರ್ನಾಟಕದ ನೀರಿನ ಅಗತ್ಯತೆಯನ್ನು ಅರಿಯದೇ ಆದೇಶ ಮಾಡುತ್ತಿದೆ. ರಾಜ್ಯ ಸರ್ಕಾರವೂ ಸಿಡಬ್ಲುಎಂಎ ಹಾಗೂ ಸಿಡಬ್ಲುಆರ್ ಸಿ ಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಸಿಡಬ್ಲುಆರ್ ಸಿಡಬ್ಲುಎಂಎ ಆದೇಶಗಳ ವಿರುದ್ದ ಮಧ್ಯಂತರ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಹಾಕಿಲ್ಲ. ಇದರ ಪರಿಣಾಮ ರಾಜ್ಯದ ವಿರುದ್ದ ಮತ್ತೊಂದು ಆದೇಶ ಬರುವಂತಾಗಿದೆ ಎಂದು ಹೇಳಿದ್ದಾರೆ.


