ಹೆಚ್.ಡಿ.ಕೋಟೆ: ಪ್ರಕೃತಿ ವಿಕೋಪದಡಿ ಮನೆಗಳ ಪರಿಹಾರ ವಿಚಾರದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು ಲಂಚ ಪಡೆಯುತ್ತಿದ್ದಾರೆ ಎಂಬ ದೂರು ನೀಡಲು ಹೋದವರ ಮೇಲೆ ಆಕ್ರೋಶಗೊಂಡ ತಹಶಿಲ್ದಾರ್ ರತ್ನಾಂಬಿಕಾ ಹೈಡ್ರಾಮ ಆಡಿದ ವಿಡಿಯೋ ವೈರಲ್ ಆಗಿದೆ.
ಪ್ರಕೃತಿ ವಿರೋಪದಡಿ ಮನೆಗಳ ಪರಿಹಾರ ವಿಚಾರ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು ಲಂಚ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಲು ರೈತ ಸಂಘದ ನಾಗರಾಜು ಮತ್ತು ದಸಂಸ ಶಿವಕುಮಾರ್ ತಹಶೀಲ್ದಾರ್ ಕಚೇರಿಗೆ ತೆರಳಿದ್ದರು. ಈ ವೇಳೆ ದೂರು ನೀಡಲು ಹೋದವರ ವಿರುದ್ಧವೇ ರತ್ನಾಂಬಿಕಾ ಆಕ್ರೋಶ ವ್ಯಕ್ತಪಡಿಸಿ ಹೈಡ್ರಾಮ ಆಡಿದ್ದಾರೆನ್ನಲಾಗಿದೆ.
ಹೋರಾಟಗಾರರ ಜೊತೆಗೆ ವಾದಕ್ಕಿಳಿದ ತಹಶೀಲ್ದಾರ್ ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಕೆಂಡಾಮಂಡಲವಾದ ತಹಶೀಲ್ದಾರ್ ಟೇಬಲ್ ಮೇಲಿದ್ದ ದಾಖಲೆಗಳನ್ನು ಎಸೆದು ಹೈಡ್ರಾಮ ಆಡಿದ್ದು, ಈ ವೇಳೆ ಕಚೇರಿ ಸಿಬ್ಬಂದಿ ಅವರನ್ನು ಸಮಾಧಾನ ಪಡಿಸಲು ಹರಸಾಹಸಪಟ್ಟಿದ್ದಾರೆ. ಈ ವೇಳೆ ಕಚೇರಿಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ವರದಿ: ಮಲಾರ ಚಂದ್ರ, ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


