ತಿಪಟೂರು: ವಾಹನ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಬಹುತೇಕ ದ್ವಿಚಕ್ರ ಸವಾರರು ಹ್ಯಾಂಡ್ ಲಾಕ್ ಮಾಡದೇ ಹಾಗೆಯೇ ಬೈಕ್ ನ್ನು ಬಿಟ್ಟು ಹೋಗುತ್ತಿರುವುದು ಬೈಕ್ ಕಳ್ಳರಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಲು ಪೊಲೀಸರೇ ಕಾರ್ಯಾಚರಣೆಗಿಳಿದ ಘಟನೆ ತಿಪಟೂರಿನಲ್ಲಿ ನಡೆದಿದೆ.
ತಿಪಟೂರು ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಹ್ಯಾಂಡ್ ಲಾಕ್ ಮಾಡದೆ ವಾಹನ ಸವಾರರು ಜಾಗರೂಕತೆಯಿಂದ ಬಿಟ್ಟು ಹೋದ ವಾಹನಗಳು ಹಾಗೂ ವಾಹನದಲ್ಲೇ ಕೀ ಬಿಟ್ಟು ಹೋದ ನೂರಾರು ವಾಹನಗಳನ್ನ ವಶಕ್ಕೆ ಪಡೆದರು.
ನಗರಠಾಣೆ ವೃತ್ತನಿರೀಕ್ಷಕರಾದ ಶ್ರೀಶೈಲಕುಮಾರ್, ನಗರಠಾಣಾ ಸಬ್ ಇನ್ಸ್ ಪೆಕ್ಟರ್ ದ್ರಾಕ್ಷಣಮ್ಮ, ಶಿವಣ್ಣ, ಕೃಷ್ಣಕುಮಾರ್, .ಎಎಸ್ ಐ ನಿಸಾರ್, ರಾಮಣ್ಣ ಸೇರಿದಂತೆ ಸಿಬ್ಬಂದಿ ಭಾಗವಹಿಸಿದರು .
ನಗರದ ಬಿ.ಹೆಚ್.ರಸ್ತೆ, ಕೆ.ಎಸ್ ಆರ್.ಟಿ ಸಿ ಬಸ್ ಸ್ಯಾಂಡ್ ರಸ್ತೆ ಹಾಗೂ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಲಾಯಿತು
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz