ವರದಿ : ಮಂಜು ಸ್ವಾಮಿ ಎಂ.ಎನ್.
ತುಮಕೂರು : ಮಧುಗಿರಿ ಪುರಸಭಾ ವ್ಯಾಪ್ತಿಯ ವಾರ್ಡ್ ನಂಬರ್ ೦೭ ರ ಕಾರ್ಯಪ್ಪ ಬಡಾವಣೆಯ ಲಿಂಗೇನಹಳ್ಳಿಗೆ ಸೇರಿದ ಆಸ್ತಿ ಸಂಖ್ಯೆ : 7244/706/17 ರ ಅನಧಿಕೃತ ಅನಧಿಕೃತ ಬಡಾವಣೆಗೆ ಸೇರಿದ್ದು ಸರ್ಕಾರದ ಆದೇಶ ಸುತ್ತೋಲೆಗಳನ್ನು ಇಲ್ಲಿನ ಅಧಿಕಾರಿಗಳು ಉಲ್ಲಂಘಿಸಿ ಇ ಖಾತಾ ಮಾಡಿಸಿರುವುದು ಬೆಳಕಿಗೆ ಬಂದಿದೆ..
ಮಧುಗಿರಿ ಪುರಸಭಾ ವ್ಯಾಪ್ತಿಯ ವಾರ್ಡ ನಂಬರ್ ೦೭ ರ ಕಾರ್ಯಪ್ಪ ಬಡಾವಣೆ ಲಿಂಗೇನಹಳ್ಳಿಗೆ ಸೇರಿದ ಆಸ್ತಿ ಸಂಖ್ಯೆ: 7244/706/17 ರ ಸ್ವತ್ತು ಅನಧಿಕೃತವಾಗಿ ಮಾಡಿದ ಬಡಾವಣೆಗೆ ಸೇರಿದ ಸ್ವತರಾಗಿರುತ್ತದೆ. ಈ ಬಡಾವಣೆಯಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಿವೇಶನಗಳನ್ನಾಗಿ ವಿಂಗಡಿಸಿರುತ್ತಾರೆ. ಕಾರ್ಯಪ್ಪ ಬಡಾವಣೆ ಲಿಂಗೇನಹಳ್ಳಿಗೆ ಸೇರಿದ ಆಸ್ತಿ ಸಂಖ್ಯೆ: 7244/706/17 ರ ಸ್ವತ್ತನ್ನು ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿ ಈ ಅನಧಿಕೃತ ಬಡಾವಣೆಗಳ ಆಸ್ತಿಗಳಿಗೆ ಇ-ಖಾತಾ ನಕಲನ್ನು ನೀಡಿರುವುದು ಬೆಳಕಿಗೆ ಬಂದಿದೆ.
ಅನಧಿಕೃತ ಬಡಾವಣೆಗಳ ನಿವೇಶನಕ್ಕೆ ಇ–ಖಾತಾ :
ಮಧುಗಿರಿ ಪುರಸಭೆಯ ಮುಖ್ಯಾಧಿಕಾರಿ ಸುರೇಶ್, ಕಂದಾಯಾಧಿಕಾರಿ ವಸಂತಕುಮಾರಿ, ಪ್ರಭಾರ ಕಂದಾಯ ನಿರೀಕ್ಷಕರಾದ ಡಿ.ಎನ್.ಮಂಜುನಾಥ್ ಮತ್ತು ವಿಷಯ ನಿರ್ವಾಹಕರಾದ ದ್ವಿ.ದ.ಸ. ಎಲ್.ವಿ.ಜಗದೀಶ್ ಇವರುಗಳೇ ಪುರಸಭಾ ವ್ಯಾಪ್ತಿಯ ವಾರ್ಡ ನಂಬರ್ 07 ರ ಕಾರ್ಯಪ್ಪ ಬಡಾವಣೆ ಲಿಂಗೇನಹಳ್ಳಿಗೆ ಸೇರಿದ ಆಸ್ತಿ ಸಂಖ್ಯೆ: 7244/706/17 ರ ಸ್ವತ್ತು ಅನಧಿಕೃತ ಬಡಾವಣೆಗೆ ಸೇರಿದ್ದು ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿ ಅನಧಿಕೃತ ಬಡಾವಣೆಗಳ ಆಸ್ತಿಗಳಿಗೆ ಇ–ಖಾತಾ ನಕಲನ್ನು ನೀಡಿರುತ್ತಾರೆ ಮತ್ತು ಸ್ವತ್ತಿಗೆ ಇ–ಖಾತಾವನ್ನು ನೀಡಲು ಶಿಫಾರಸ್ಸು ಮಾಡಿ ವರದಿ ನೀಡಿ ಇ–ಖಾತಾ ನಕಲು ಪ್ರತಿಯನ್ನು ವಿತರಿಸಲು ನೇರ ಕಾರಣಕರ್ತರಾಗಿರುತ್ತಾರೆ ಎಂದು ಕಾಳಜಿ ಫೌಂಡೇಶನ್ ಸಂಘಟನಾ ಕಾರ್ಯದರ್ಶಿ ಮಧುಗಿರಿ ಮಹೇಶ್ ಆರೋಪಿಸಿದ್ದಾರೆ..
ಪುರಸಭೆ ವ್ಯಾಪ್ತಿಯಲ್ಲಿ ಬರುವ ಅನೇಕ ಅನಧಿಕೃತ ಬಡಾವಣೆಗಳಿಗೆ ಇ–ಖಾತಾ ನೀಡಿದ್ದು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸ್ವ– ಹಿತಾಸಕ್ತಿಗಾಗಿ ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಹಾಕಿರುವುದು ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದ್ದೆ ಎಂದಿದ್ದಾರೆ.
ಸ್ವಹಿತಾಸಕ್ತಿಗಾಗಿ ಕರ್ತವ್ಯ ಲೋಪ ಮಾಡಿರುವ ಅಧಿಕಾರಿಗಳಿಗೆ ಕಡಿವಾಣ ಹಾಕುವ ಕರ್ನಾಟಕ ಲೋಕಾಯುಕ್ತದ ನಿಯಮದ ಪ್ರಕಾರ ಕ್ರಮ ಜರುಗಿಸಬೇಕೆಂದು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿರುವ ಸಂಗತಿಯೂ ನಡೆದಿದೆ.
ಕರ್ತವ್ಯಲೋಪ ಎಸಗಿದ ಅಧಿಕಾರಿಗಳಿಗೆ ನೋಟಿಸ್ :
ಪುರಸಭೆಯ ಕಂದಾಯಾಧಿಕಾರಿಯಾದ ಶ್ರೀಮತಿ ವಸಂತಕುಮಾರಿ, ಪುಭಾರ ಕಂದಾಯ ನಿರೀಕ್ಷಕರಾದ ಶ್ರೀ ಡಿ.ಎನ್ ಮಂಜುನಾಥ್ (ಮೂಲ ಹುದ್ದೆ ಕರವಸೂಲಿಗಾರ) ಮತ್ತು ವಿಷಯ ನಿರ್ವಾಹಕರಾದ ಎಲ್.ಎ ಜಗದೀಶ್ ಗೆ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 07ರ, ಲಿಂಗೇನಹಳ್ಳಿಗೆ ಸೇರಿದ ಆಸ್ತಿ ಸಂಖ್ಯೆ: 7244/706/17 ರ ಸ್ವತ್ತು ಅನಧಿಕೃತ ಬಡಾವಣೆಗೆ ಸೇರಿರುತ್ತದೆ. ಸರ್ಕಾರದ ಸುತ್ತೋಲೆಯಂತೆ ಅನಧಿಕೃತ ಬಡಾವಣೆಗಳ ಆಸ್ತಿಗಳಿಗೆ ಇ-ಖಾತಾ ನಕಲನ್ನು ನೀಡಲು ಅವಕಾಶ ಇರುವುದಿಲ್ಲ, ಆದರೆ ಮೇಲ್ಕಂಡ ಪ್ರಸ್ತಾಪಿತ ಸ್ವತ್ತಿಗೆ ಇ-ಖಾತಾವನ್ನು ನೀಡಲು ಶಿಫಾರಸ್ಸು ಮಾಡಿ ವರದಿ ನೀಡಿ ಇ-ಖಾತಾ ನಕಲು ಪ್ರತಿಯನ್ನು ವಿತರಿಸಲು ನೇರ ಕಾರಣಕರ್ತರಾಗಿರುತ್ತೀರ ಆದ್ದರಿಂದ ನಿಮ್ಮಗಳ ವಿರುದ್ಧ ಕರ್ತವ್ಯಲೋಪ ಮತ್ತು ಬೇಜವಾಬ್ದಾರಿ ತನ ಮತ್ತು ಮೇಲಾಧಿಕಾರಿಗಳಿಗೆ ತಪ್ಪು ವರದಿ ನೀಡಿರುವ ಪ್ರಯುಕ್ತ ಕೆ.ಸಿ.ಎಸ್.ಆರ್ ನಿಯಮಾವಳಿಗಳ ಪ್ರಕಾರ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಗಮನಕ್ಕೆ ತರಲು ಕಾರಣ ಕೇಳಿ ನೋಟೀಸ್ ನೀಡಿ ಜಾರಿ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx