ಹಣಕಾಸು ಅವ್ಯವಹಾರ ಆರೋಪ ಪ್ರಕರಣ ಕುರಿತು ಜಾರಿ ನಿರ್ದೇಶನಾಲಯ (ಇಡಿ)ನಡೆಸುತ್ತಿರುವ ತನಿಖೆಯನ್ನು ಪ್ರಶ್ನಿಸಿ ಕೇರಳದ ಐವರು ಎಲ್‍ಡಿಎಫ್ ಶಾಸಕರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸಿಪಿಐ(ಎಂ) ಶಾಸಕರಾದ ಕೆ ಕೆ ಶೈಲಜಾ, ಐ ಬಿ ಸತೀಶ್ ಮತ್ತು ನಟ ಎಂ ಮುಖೇಶ, ಸಿಪಿಐ ಶಾಸಕ ಇ ಚಂದ್ರಶೇಖರನ್ ಮತ್ತು ಕಾಂಗ್ರೆಸ್ (ಜಾತ್ಯತೀತ) ಶಾಸಕ ಕಡನಪ್ಪಲ್ಲಿ ರಾಮಚಂದ್ರನ್ ಅವರು ಇಡಿ ತನಿಖೆಯನ್ನು ವಿರೋಧಿಸಿ ಹೈಕೋರ್ಟ್‍ನಲ್ಲಿ ಜಂಟಿ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರ ಪೀಠದ ಮುಂದೆ ಈ ಅರ್ಜಿಯ ವಿಚಾರಣೆಗೆ ನಡೆಯಲಿದೆ.
ವಿದೇಶಿ ವಿನಿಮಯ, ಮೂಲಸೌಕರ್ಯ ನಿ ಹೊಡಿಕೆಯಲ್ಲಿ ನಡೆದಿರುವ ಅಕ್ರಮ ಕುರಿತು ತನಿಖೆಗೆ ಹಾಜರಾಗ ಬೇಕೆಂದು ನೀಡಿದ ಸಮನ್ಸ್ ಗಳನ್ನು ಕೂಡ ಪ್ರಶ್ನಿಸಿ ಪ್ರತ್ಯೇಕ ಮನವಿಯಲ್ಲಿ ಮಾಜಿ ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್ ಸಲ್ಲಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy