ಸಂಗೀತ ಕೇಳುವುದು ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಆದರೆ ಕೆಲವರು ಿದಕ್ಕೆ ತುಂಬಾ ಅಡಿಕ್ಟ್ ಆಗಿ ಹೋಗಿರುತ್ತಾರೆ. ಜೊತೆಗೆ ಮಲಗುವಾಗಲು ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಲೇ ಮಲಗುತ್ತಾರೆ. ಈ ರೀತಿ ಮಲಗುವಾಗಲೂ ಇಯರ್ ಫೋನ್ ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಅಭ್ಯಾಸವಲ್ಲವಂತೆ. ಹೀಗೆ ಮಾಡುವುದರಿಂದ ನಮಗೆ ತುಂಬಾ ಸಮಸ್ಯೆ ಉಂಟಾಗಲಿದೆ.
ಶ್ರವಣ ದೋಷಕ್ಕೆ ಕಾರಣವಾಗಬಹುದು:
ನಮ್ಮ ದೇಹದ ಪ್ರತಿಯೊಂದು ಅಂಗಕ್ಕೂ ವಿಶ್ರಾಂತಿಯ ಅಗತ್ಯವಿರುತ್ತದೆ. ಅದರಂತೆ ಕಿವಿಗೂ ಸಹ ವಿಶ್ರಾಂತಿ ನೀಡಬೇಕು. ಆದರೆ ನಾವು ಹೆಚ್ಚು ಕಾಲ ಇಯರ್ ಫೋನ್ ಬಳಸಿದರೆ ಕಿವಿಯ ಮೇಲಿನ ಒತ್ತಡ ಹೆಚ್ಚಾಗುತ್ತದೆ ಇದು ಶ್ರವಣ ದೋಷಕ್ಕೆ ಕಾರಣವಾಗಬಹುದು. ಕಿವಿಯಲ್ಲಿನ ನರಗಳಿಗೆ ಹಾನಿಯುಂಟಾಗುತ್ತದೆ.
ಕಿವಿಯ ವ್ಯಾಕ್ಸ್ ತಳ್ಳಲ್ಪಡುತ್ತದೆ:
ಕಿವಿಯ ವ್ಯಾಕ್ಸ್ ಅನ್ನು ನಿಯಮಿತವಾಗಿ ತೆಗೆಯದೆ ಇದ್ದಾಗ ಕಿವಿ ನೋವು, ಇಲ್ಲವೆ ಸರಿಯಾಗಿ ಕೇಳಿಸದೆ ಇರಬಹುದು. ನೀವು ಸದಾ ಇಯರ್ ಫೋನ್ ಬಳಸುವುದರಿಂದ ಈ ವ್ಯಾಕ್ಸ್ ಮುಂದಕ್ಕೆ ತಳ್ಳಲ್ಪಡುತ್ತದೆ. ಹೀಗಾಗಿ ವ್ಯಾಕ್ಸ್ ಅನ್ನು ಕಿವಿಯಿಂದ ತೆಗೆಯುವುದು ಕಷ್ಟಕರವಾಗುತ್ತದೆ.
ಮೆದುಳಿನ ಹಾನಿ:
ನೀವು ಸಂಗೀತವನ್ನು ಕೇಳುತ್ತಾ ಮಲಗಿದರೆ, ಮೆದುಳು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವುದಿಲ್ಲ. ಇದರ ಜೊತೆ ಇಯರ್ ಫೋನ್ ನಲ್ಲಿರುವ ವಿದ್ಯುತ್ಕಾಂತೀಯ ವಹನವು ಮೆದುಳಿನ ಕೋಶಗಳನ್ನು ಹಾನಿಗೊಳಿಸುತ್ತದೆ.
ಕಿವಿ ಸೋಂಕಿಗೆ ಕಾರಣವಾಗಬಹುದು:
ಇಯರ್ ಫೋನ್ ಗಳನ್ನು ಹೆಚ್ಚು ಸಮಯ ಮತ್ತು ದೀರ್ಘಕಾಲದವರೆಗೆ ಬಳಸುವುದರಿಂದ ಕಿವಿಯ ಸೋಂಕುಗಳು ಉಂಟಾಗಬಹುದು ಮತ್ತು ನೋವನ್ನು ಉಂಟುಮಾಡಬಹುದು.