ಸರಗೂರು: ತಾಲೂಕಿನಲ್ಲೇ ದೊಡ್ಡಗ್ರಾಮವಾದ ಲಂಕೆ ಗ್ರಾಮವನ್ನು ಮಾದರಿ ಗ್ರಾಮ ಮಾಡುವುದಾಗಿ ಶಾಸಕರು, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಲಂಕೆ ಗ್ರಾಮದಲ್ಲಿ ಶನಿವಾರದಂದು 1 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ದೊಡ್ಡ ಗ್ರಾಮವಾದ ಲಂಕೆಗೆ ನಾನು ಶಾಸಕನಾದ ಮೇಲೆ ಸುಮಾರು 5 ಕೋಟಿ ರೂ.ಗಳಿಗೆ ಹೆಚ್ಚು ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಿ, ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು. ಇಲ್ಲಿ ಎಲ್ಲ ಸಮುದಾಯದವರು ವಾಸವಾಗಿದ್ದೀರಿ. ಮಾಜಿ ಶಾಸಕರಾದ ತಂದೆ ದಿ.ಚಿಕ್ಕಮಾದು, ಮಾಜಿ ಸಂಸದ ಆರ್.ಧ್ರುವನಾರಾಯಣ ಅವರು ಹೆಚ್ಚಿನ ಶ್ರಮ ವಹಿಸಿ, ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಂದಾಗಿದ್ದರು ಎಂದು ಅವರು ಹೇಳಿದರು.
“ಗ್ರಾಮದಲ್ಲಿನ ರಸ್ತೆ, ಚರಂಡಿ, ಅಂಬೇಡ್ಕರ್ ಸಮುದಾಯಭವನ, ಆಸ್ಪತ್ರೆ, ಅಂಗನವಾಡಿ ಸೇರಿದಂತೆ ಇನ್ನಿತರ ಕಾಮಗಾರಿಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಅನುದಾನ ನೀಡುವ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡುತ್ತೇನೆ. ಹಾಗೆ ಹೈಟೆಕ್ ಬಸ್ ನಿಲ್ಧಾಣ ನಿರ್ಮಾಣ, ಕಾಡಂಚಿನಲ್ಲಿ ಪ್ರಾಣಿಗಳ ಹಾವಳಿ ತಡೆಗೆ ಬ್ಯಾರಿಕೇಡ್ ಕಾಮಗಾರಿಗೆ ಕ್ರಮ ವಹಿಸಲಾಗುವುದು. ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ. ಇದಲ್ಲದೆ ನನ್ನ ರಾಜಕೀಯ ಗುರುಗಳಾದ ದಿ.ಆರ್.ಧ್ರುವನಾರಾಯಣ್ ಅವರ ಕೊಡುಗೆಯೂ ಗ್ರಾಮಕ್ಕೆ ಇದೆ. ಹೀಗಾಗಿ ಎಲ್ಲರೂ ಒಗ್ಗೂಡಿ ಪಕ್ಷ ಬೆಂಬಲಿಸಬೇಕು. ಗ್ರಾಮದಲ್ಲಿನ ಹತ್ತಾರು ಸಮಸ್ಯೆಗಳನ್ನು ಹಂತ–ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಬಗೆಹರಿಸಲಾಗುವುದು ಎಂದು ಅವರು ಹೇಳಿದರು.
ಗ್ರಾಮದ ಗ್ರಾಪಂ ಸದಸ್ಯ ಪುಟ್ಟು ಹಾಗೂ ಶ್ರೀನಿವಾಸ ಮಾತನಾಡಿ, ನಮ್ಮ ಗ್ರಾಮ ತಾಲ್ಲೂಕಿನ ದೊಡ್ಡಗ್ರಾಮ ಇಲ್ಲಿ ಎಲ್ಲಾ ಸಮುದಾಯದಗಳು ಇವೆ. ಇಲ್ಲಿ ನಾವು ಸಹಬಾಳ್ವೆ ಸಮಾನತೆಯಿಂದ ಹೋಗುತ್ತಿದ್ದೇವೆ. ಆದರಿಂದ ಲಿಂಗಾಯತ ಮತ್ತು ದಲಿತ ಸಮುದಾಯಗಳಿಗೆ ಸಮುದಾಯದ ಭವನಗಳು ಅವಕಾಶ ತುಂಬಾ ಇದೆ. ಹಾಗೂ ನಮ್ಮ ಗ್ರಾಮದಲ್ಲಿ 4 ರಿಂದ 5 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಿಂದ ಮನುಗನಹಳ್ಳಿ ಹಾಗೂ ನಂಜನಗೂಡಿನ ಚಂದ್ರವಾಡಿನಲ್ಲಿರುವ ಪ್ರೌಢಶಾಲೆಗಳಿಗೆ ಮಕ್ಕಳು ಹೋಗುತ್ತಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇರುವುದಿಲ್ಲ ನಮಗೆ ಪ್ರೌಢಶಾಲೆ ನಿರ್ಮಾಣ ಮಾಡಬೇಕು ಹಾಗೂ ಸರ್ಕಾರಿ ಆರೋಗ್ಯ ಉಪ ಕೇಂದ್ರ ಇದೆ ಅದರೆ ಇಲ್ಲಿ ಸಿಬ್ಬಂದಿಗಳು ಹಾಗೂ ವೈದ್ಯರು ಇರುವುದಿಲ್ಲ. ನಮ್ಮ ಉಪಕೇಂದ್ರ ಆರೋಗ್ಯ ಕೇಂದ್ರಕ್ಕೆ ವೈದ್ಯರು ನೇಮಕ ಮಾಡಬೇಕು. ಅಲ್ಲದೇ ಕಾಡಂಚಿನ ಭಾಗದಲ್ಲಿರುವ ಜಮೀನಿಗೆ ಪ್ರತಿನಿತ್ಯ ಕಾಡು ಪ್ರಾಣಿಗಳು ಬರುತ್ತಿದ್ದೇವೆ ಅದರಿಂದ ಅತಿ ಶೀಘ್ರದಲ್ಲಿ ಬ್ಯಾರಿಕೇಡ್ ನಿರ್ಮಾಣ ಮಾಡಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಎಇಇ ರಮೇಶ್, ಗುತ್ತಿಗೆದಾರ ಮಂಜುನಾಥ್, ಲಂಕೆ ಗ್ರಾಮದ ಗೌಡಿಕೆ ಶಿವಮಲ್ಲಪ್ಪ, ಮಾಜಿ ಗೌಡಿಕೆ ಸೋಮಪ್ಪ, ಯಜಮಾನರಾದ ರಂಗಯ್ಯ, ಚನ್ನಯ್ಯ, ನಿಂಗಯ್ಯ ಮಲ್ಲಿಕಾರ್ಜನ, ಪಾರ್ವತ, ಬಿಲ್ಲಯ್ಯ, ಗ್ರಾಮ ಪಂಚಾಯಿತಿ, ಸದಸ್ಯರಾದ ಪುಟ್ಟು, ಕರಿಸ್ವಾಮಿ, ಸೋಮಶೇಖರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಗುರುಸ್ವಾಮಿ, ಸೌಮ್ಯ ಮಂಜುನಾಥ, ಶಶಿಪಾಟೀಲ್, ಉಮೇಶ್ ವನಸಿರಿ, ಕೃಷ್ಣಪ್ಪ, ಚಿನ್ನಪ್ಪ, ದೇವರಾಜು, ದಯಾನಂದ, ಮಹದೇವಸ್ವಾಮಿ ಮಾಧು, ಸೋಮು, ಮಂಜುನಾಥ, ಈಶ್ವರ್, ಆದಿಕರ್ನಾಟಕ ಮಹಾಸಭಾದ ಖಜಾಂಚಿ ಶ್ರೀನಿವಾಸ್, ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್, ವೆಂಕಟಸ್ವಾಮಿ, ಉಮೇಶ್, ಪಿ.ನಂದೀಶ್, ಗ್ರಾಮಸ್ಥರು, ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


