ಮೊಟ್ಟೆಯ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಹಾಗಂತ ಅತೀಯಾಗಿ ಸೇವನೆ ಮಾಡಿದ್ರೆ, ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಅದಕ್ಕೆ ಮುಖ್ಯವಾದ ಕಾರಣಗಳೇನು ಅನ್ನೋದನ್ನು ತಿಳಿಯೋಣ.
ಮೊಟ್ಟೆಯಲ್ಲಿ ಬಿಳಿ ಹಾಗೂ ಹಳದಿ ಬಣ್ಣದ ಎರಡು ಅಂಶಗಳಿವೆ. ಬಿಳಿ ಭಾಗವು ಪ್ರೋಟೀನ್ ಆಗಿದ್ದರೆ, ಹಳದಿ ಬಣ್ಣವು ಕೊಲೆಸ್ಟ್ರಾಲ್ ಆಗಿದೆ. ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ 4 ರಿಂದ 5 ಗ್ರಾಂ ಪ್ರೋಟೀನ್ ಸಿಗುತ್ತದೆ. ಹಳದಿ ಭಾಗದಲ್ಲಿ 6 ಗ್ರಾಂನಷ್ಟು ಕೊಬ್ಬು ಮತ್ತು ಸುಮಾರು ಒಂದು ಗ್ರಾಂ ಪ್ರೋಟೀನ್ ಇರುತ್ತದೆ. ಒಂದು ಮೊಟ್ಟೆಯನ್ನು ತಿಂದರೆ 5 ರಿಂದ 6 ಗ್ರಾಂ ಪ್ರೋಟೀನ್ ಮತ್ತು 6 ಗ್ರಾಂ ಕೊಬ್ಬು ಸಿಗುತ್ತದೆ.
ಒಂದು ಮೊಟ್ಟೆಯಲ್ಲಿರೋ ಹಳದಿ ಭಾಗವು 95 ಮಿಗ್ರಾಂ ಕೊಲೆಸ್ಟ್ರಾಲ್ ನ್ನು ಹೊಂದಿದೆ. ಆರೋಗ್ಯಕರ ದೇಹಕ್ಕಾಗಿ ಪ್ರತಿದಿನ ಕೊಲೆಸ್ಟ್ರಾಲ್ ಸೇವನೆ 200 ಮಿಲಿಗ್ರಾಂಗಿಂತಲೂ ಕಡಿಮೆ ಇರಬೇಕು. ಆದರೆ ಪ್ರತಿ ದಿನ 5ಕ್ಕಿಂತ ಹೆಚ್ಚು ಬಿಳಿ ಹಾಗೂ ಹಳದಿ ಭಾಗವನ್ನು ಸೇರಿಸಿ ಮೊಟ್ಟೆ ಸೇವನೆ ಮಾಡುವುದು ಅಪಾಯಕಾರಿಯಾಗಿದೆ.
ಪ್ರತಿದಿನ 5 ಮೊಟ್ಟೆಗಳನ್ನು ಸೇವಿಸಿದರೆ 475 ಮಿಲಿ ಗ್ರಾಂ ಕೊಲೆಸ್ಟ್ರಾಲ್ ನಮ್ಮ ದೇಹಕ್ಕೆ ಸೇರುತ್ತದೆ. ಪ್ರತೀ ದಿನ 5 ಮೊಟ್ಟೆ ಸೇವನೆ ಮಾಡಿದ್ರೆ ಇದರಿಂದ ಹಲವಾರು ಕಾಯಿಲೆಗಳು ಬರಬಹುದು. ಅದರಲ್ಲೂ ಬಹು ಮುಖ್ಯವಾಗಿ ಹೃದಯದ ಕಾಯಿಲೆಗಳು ಕೂಡ ಬರಬಹುದು. ಹಾಗಾಗಿ 4ರಿಂದ 5 ಮೊಟ್ಟೆ ಸೇವಿಸುವ ಅಭ್ಯಾಸವನ್ನು ಹೊಂದಿದ್ದರೆ ತಕ್ಷಣವೇ ನೀವು ತಿನ್ನುವ ಮೊಟ್ಟೆಯ ಪ್ರಮಾಣವನ್ನು ಕಡಿಮೆಗೊಳಿಸಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy