ತುಮಕೂರು: ಟೀ ಮಾರುತ್ತಿದ್ದ ವ್ಯಕ್ತಿಯೇ ಇಂದು ಪ್ರಧಾನಿ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ ಹಾಗಾಗಿ ಅದೃಷ್ಟ ಎಂಬುದು ಯಾರಿಗೆ ಇರುತ್ತದೆ ಎಂಬುದು ಹೇಳಲು ಅಸಾಧ್ಯ. ಅಂತಹ ಒಂದು ಪ್ರಸಂಗ ತುಮಕೂರು ಜಿಲ್ಲೆಯಲ್ಲಿ ನಡೆದಿದ್ದು ಟೀ ಮಾರುತಿದ್ದ ಮಹಿಳೆಯೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ದೇವರಾಯನದುರ್ಗ ಪ್ರದೇಶದಲ್ಲಿರುವ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಎದುರು ಟಿ ಅಂಗಡಿ ಇಟ್ಟುಕೊಂಡು ಮಾರುತಿದ್ದ ಮಹಿಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿನ್ನೆ ತುಮಕೂರು ತಾಲೂಕಿನ ಉರ್ಡಿಗೆರೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಟೀ ಅಂಗಡಿ ಇಟ್ಟುಕೊಂಡು ಬದುಕು ನಡೆಸುತ್ತಿದ್ದ ಅನ್ನಪೂರ್ಣಮ್ಮ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ದೇವರಾಯನದುರ್ಗ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದರು.
ನಿನ್ನೆ ನಡೆದ ಗ್ರಾ.ಪಂ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ತುಮಕೂರಿನ ಉರ್ಡಿಗೆರೆ ಗ್ರಾ.ಪಂ.ಗೆ ಅಧ್ಯಕ್ಷೆಯಾದ ಅನ್ನಪೂರ್ಣಮ್ಮ ಅವಿರೋಧವಾಗಿ ಉರ್ಡಿಗೆರೆ ಗ್ರಾ.ಪಂ ಸದಸ್ಯರು ಆಯ್ಕೆ ಮಾಡಿದ್ದಾರೆ.
ಇನ್ನು ಟೀ ಮಾರಾಟ ಮಾಡ್ತಿದ್ದ ಮೋದಿ ಇಂದು ದೇಶದ ಪ್ರಧಾನಿಯಾಗಿದ್ದಾರೆ.. ಅವರದ್ದು ದೇಶ ಅಭಿವೃದ್ಧಿ ಕನಸಾದರೆ, ಈಕೆದು ಗ್ರಾಮ ಅಭಿವೃದ್ದಿಯ ಕನಸು. ಆದರೆ ಅವ್ರು ಪ್ರಧಾನಿ ಆದ್ಮೇಲೆ ಚಹ ಮಾರೋದು ಬಿಟ್ರು. ಇವ್ರು ಗ್ರಾ.ಪಂ ಅಧ್ಯಕ್ಷೆಯಾದ್ರೂ ಚಹಾ ಮಾರೋದು ಬಿಡಲ್ಲ.ಹೊಟ್ಟೆ ಪಾಡಿಗೆ ಚಹಾ, ಗ್ರಾಮ ಸೇವೆಗೆ ಗ್ರಾ.ಪಂ ಅಧ್ಯಕ್ಷೆ. ತನ್ನ ಕೆಲಸವನ್ನು ಅನ್ನಪೂರ್ಣಮ್ಮ ಮುಂದುವರಿಸಿದ್ದಾರೆ.
ಒಟ್ಟಾರೆ ದೇವಸ್ಥಾನದ ಮುಂದೆ ಟೀ ಮಾರುವ ಜೊತೆಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಕೆಲಸಗಳ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ತನ್ನ ಕೆಲಸವನ್ನ ಅತ್ಯುತ್ತಮವಾಗಿ ನಿರ್ವಹಿಸೋದಾಗಿ ಅನ್ನಪೂರ್ಣಮ್ಮ ಭರವಸೆ ಕೊಟ್ಟಿದ್ದಾರೆ.
ಅವರ ಕನಸು ನನಸಾಗಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಒಲಿದುಬಂದಿದ್ದಕ್ಕೆ ಅನ್ನಪೂರ್ಣಮ್ಮ ಅವರಿಗೆ ಇನ್ನಿಲ್ಲದ ಸಂತೋಷ ವ್ಯಕ್ತವಾಗಿದೆ. ಅಲ್ಲದೆ ಟೀ ಅಂಗಡಿ ನಡೆಸುವ ಜೊತೆ ಜೊತೆಗೆ ಗ್ರಾಮ ಪಂಚಾಯತಿಯ ಎಲ್ಲಾ ಜವಾಬ್ದಾರಿಯನ್ನು ಅಧ್ಯಕ್ಷರಾಗಿ ನಿರ್ವಹಿಸುವುದಾಗಿ ಅಲ್ಲದೆ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರುವ ಕುರಿತು ಭರವಸೆಯನ್ನು ಕೂಡ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy