ಕೆಂಗೇರಿ ಠಾಣೆ ವ್ಯಾಪ್ತಿಯ ಜ್ಞಾನಭಾರತಿ ಲೇಔಟ್ ನಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರವ ಮನೆಗೆ ಅಳವಡಿಸಿದ್ದ ಎಲೆಕ್ಟ್ರಿಕ್ ವೈರ್ ಕಳ್ಳತನವಾಗಿತ್ತು.ಕಳೆದ ಸೆ. 20 ರ ಬೆಳಗ್ಗೆ ಸುಮಾರು 6 ಗಂಟೆಗೆ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು. ದೂರಿನಾಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು ಸೆ.29ರಂದು ತಮಿಳುನಾಡು ಮೂಲದ ಆರೋಪಿ
ವೈರಮುಗಲನನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿ ನೀಡಿದ ಮಾಹಿತಿ ಮೇರೆಗೆ ಸಮಾರು ಒಟ್ಟು 6,00,000/-ರೂ ಬೆಲೆ ಬಾಳುವ ವಿವಿಧ ಬಣ್ಣಗಳ ಒಟ್ಟು 93 ಬಂಡಲ್ ಎಲೆಕ್ಟ್ರಿಕ್ ವೈರ್ ಗಳು ಮತ್ತು 01 ಚಕ್ರ ವಾಹನವನ್ನು ವಶಪಡಿಸಿಕೊಳ್ಳವಲ್ಲಿ ಯಶಸ್ವಿಯಾಗಿರುತ್ತಾರೆ.


