ಮಧುಗಿರಿ: ರಾಜಕೀಯ ಜೀವನದಲ್ಲಿ ಅಧಿಕಾರ ಇಂದು ಇದ್ದು ನಾಳೆ ಇರಲ್ಲ, ಆದರೆ ಶಿಕ್ಷಕರ ಜೀವನದಲ್ಲಿ ಶಿಕ್ಷಣ ನೀಡುವ ಅಧಿಕಾರ ಕೊನೆವರೆಗೂ ಉಳಿಯುತ್ತೆ ಎಂದು ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಮಧುಗಿರಿ ಪಟ್ಟಣದ ಮಾಲಿಮರಿಯಪ್ಪ ರಂಗ ಮಂದಿರದಲ್ಲಿ ಶಿಕ್ಷಣ ಇಲಾಖೆ ತಾಲೂಕ್ ಆಡಳಿತ ತಾಲೂಕು ಪಂಚಾಯತ್ ಇಲಾಖೆಗಳ ಸಹಯೋಗದಲ್ಲಿ ಶನಿವಾರ ನಡೆದ ಡಾ ಸರ್ವಪಲ್ಲಿ ರಾಧಾಕೃಷ್ಣ ರವರ 136 ನೇ ಜಯಂತಿ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಏಳು ಕೋಟಿ ಜನಸಂಖ್ಯೆ ಇದೆ ಅದರಲ್ಲಿ ಶಿಕ್ಷಕರು ಆಗುವಂತಹರು ಕೆಲವರು ಭಗವಂತ ಅವರಿಗೆ ನೀಡಿರುವ ಶಕ್ತಿ ಅಂತ ನಾವು ಸ್ಮರಣೆ ಮಾಡಬೇಕು, ತಂದೆ ತಾಯಿ ಜನ್ಮ ಕೊಟ್ಟಿರಬಹುದು ಆದರೆ ಮಕ್ಕಳನ್ನು ತಿದ್ದಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ತಲುಪಿಸುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ, ಕಳೆದ 40 ರಿಂದ 50 ವರ್ಷಗಳ ಹಿಂದೆ ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಕೊರತೆ ತೀರ ಇತ್ತು, ಇಂದು ಸಹ ಕೆಲವು ಕಡೆ ಇದೆ ಆದರೂ ಸಹ ಶಿಕ್ಷಣ ಪಡೆದು ಉತ್ತಮ ಅಂಕ ಗಳಿಸುವಲ್ಲಿ ಹೆಣ್ಣುಮಕ್ಕಳು ಮುಂದಿದ್ದಾರೆ ಎಂದು ತಿಳಿಸಿದರು.
ದುಬೈ ದೇಶದಲ್ಲಿ ಕೆಎಂಎಫ್ ಔಟ್ಲೆಟ್ ಹೊಸದಾಗಿ ಪ್ರಾರಂಭವಾಗುತ್ತಿದ್ದು ಸಚಿವರಾದ ಕೆ. ಎನ್. ರಾಜಣ್ಣ ರವರು ಅಲ್ಲಿಗೆ ತೆರಳಿದ್ದು ಅವರ ಅನುಪಸ್ಥಿತಿಯಲ್ಲಿ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಈಗಾಗಲೇ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗಳ ಮೂಲ ಸೌಕರ್ಯಗಳ ಕೊರತೆಗಳು ಗೊತ್ತಾಗಿದೆ, ಎರಡರಿಂದ ಮೂರು ವರ್ಷದಲ್ಲಿ ಶಾಲೆಗಳ ಮೂಲ ಸೌಕರ್ಯ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು ಎಂದು ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಸಹಕಾರ ಸಚಿವರ ನೇತೃತ್ವದಲ್ಲಿ 2015ರಲ್ಲಿ ಪ್ರಾರಂಭವಾದ ಶೂ ಭಾಗ್ಯ ಮಕ್ಕಳ ಪೌಷ್ಟಿಕತೆ ನಿವಾರಣೆಗಾಗಿ ಕ್ಷೀರಭಾಗ್ಯ, 10ನೇ ತರಗತಿವರೆಗೆ ಮೊಟ್ಟೆ ಚಿಕ್ಕಿ ವಿತರಣೆ ವಿಸ್ತರಣೆ ಇಂದು ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಮಾಡಿದ್ದು ತಾಲೂಕಿನಲ್ಲಿ ಮುಂದೆಯೂ ಸಹ ಅಭಿವೃದ್ಧಿ ಕೆಲಸ ಆಗಬೇಕು ಎಲ್ಲದಕ್ಕೂ ಸಹಕಾರ ಇರುತ್ತೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ ಹನುಮಂತರಾಯಪ್ಪ ಮಾತನಾಡಿ, ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ರವರು ಶಾಲಾ ಮಕ್ಕಳಿಗೆ ಶೂ ಭಾಗ್ಯ ದಿಂದ ಪ್ರಾರಂಭಿಸಿ ಮೊಟ್ಟೆ ಹಾಲು ಚಿಕ್ಕಿ ನೀಡುವ ಮೂಲಕ ಅಪೌಷ್ಟಿಕತೆ ನಿವಾರಣೆಗೂ ಸಹಕಾರಿಯಾಗಿದ್ದಾರೆ, ಉಚಿತ ಬಸ್ ಪಾಸ್ ನೀಡುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಿ ಇಂದು ಉಚಿತ ಪುಸ್ತಕ ವಿತರಣ ಕಾರ್ಯಕ್ರಮದಿಂದ ಶಾಲಾ ವಿದ್ಯಾರ್ಥಿಗಳ ವಿದ್ಯೆ ಕಲಿಕೆಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಪ್ರಧಾನ ಭಾಷಣಕಾರರಾದ ಶೃಂಗೇರಿ ವೈ ರಾಜು, ತಾಲೂಕು ಪಂ ಇಒ ಲಕ್ಷ್ಮಣ್ ಮಾತನಾಡಿದರು, ಉದ್ಘಾಟನಾ ಭಾಷಣವನ್ನು ಕಾ.ರಾ.ಪ್ರ.ಶಾ ಶಿ ಸಂಘ ಜಿಲ್ಲಾ ಅಧ್ಯಕ್ಷ ವೆಂಕಟ ರಂಗರೆಡ್ಡಿ ನೆರವೇರಿಸಿದರು, ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಸನ್ಮಾನಿಸಿದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕರಾದ ಎಂ ಆರ್ ಮಂಜುನಾಥ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮಯ್ಯ, ಕಾ.ರಾ.ಪ್ರ.ಶಾ ಶಿ ಸಂಘ ತಾಲೂಕ್ ಅಧ್ಯಕ್ಷ ಸಂಜಯ್, ಅಕ್ಷರ ದಾಸೋಹ ನಿರ್ದೇಶಕರು ಪದ್ಮಾವತಮ್ಮ, ವೈ. ಎ. ರಾಮದಾಸು, ಬಿಸಿ ಕೆಂಪಾನರಸಪ್ಪ, ತೋಟದಪ್ಪ ಎಸ್ ಹಾಗೂ ತಾಲೂಕಿನ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಅಬಿದ್ ಮಧುಗಿರಿ


