ತುರುವೇಕೆರೆ: ಒಂದು ಕುಟುಂಬದ ಪ್ರಗತಿ ಎಂಬುದು ಪುರುಷ ಮತ್ತು ಮಹಿಳೆ ಇವರಿಬ್ಬರ ಸಮಾನ ಜವಾಬ್ದಾರಿಗಳ ಮೇಲೆ ನಿಂತಿರುತ್ತದೆ. ಒಂದು ಸಂದರ್ಭದಲ್ಲಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿನಂತೆಯೇ ಒಂದು ಕುಟುಂಬದಲ್ಲಿ ಮಹಿಳೆಯೊಬ್ಬಳು ಏನಾದರೂ ಸಾಧನೆ ಮಾಡಬೇಕಾದರೆ ಅವಳಿಗೂ ತನ್ನ ಗಂಡ ಮಕ್ಕಳ ಪ್ರೋತ್ಸಾಹ ಪ್ರೇರಣೆ ಅಗತ್ಯವಾಗಿರುತ್ತದೆ ಎಂದು ಗ್ಲೋಬಲ್ ಎಂಬ ಸಿ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಶರೀತ ದೇವರ ಮನೆ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತುರುವೇಕೆರೆ ಗ್ರಾಮಾಂತರ ಯೋಜನಾ ಕಚೇರಿಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತುರುವೇಕೆರೆಯ ಗುರು ಸಿದ್ದರಾಮೇಶ್ವರ ಸಭಾಭವನದಲ್ಲಿ ನಡೆದ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ತಾಲೂಕಿನ ದಂಡಾಧಿಕಾರಿ ವೈ.ಎಂ.ರೇಣುಕುಮಾರ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಉಪನ್ಯಾಸಕ ಬಸವರಾಜು ಜಿ., ಬಲಿಯಾಗದಿರುವ “ಮನವೇ ಮೊಬೈಲ್ ಎಂಬ ಮಾಯೆಗೆ” ಎಂಬ ವಿಷಯದ ಕುರಿತು ಮೊಬೈಲ್ ನಿಂದ ಆಗುವ ಪ್ರಯೋಜನ ಮತ್ತು ದುಷ್ಪರಿಣಾಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಜ್ಞಾನವಿಕಾಸ ಕೇಂದ್ರದ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನೋರಂಜನೆ ನೀಡಿದ್ದು,
ಇನ್ನೂ ಈ ಸಭೆಯಲ್ಲಿ ಜಿಲ್ಲಾ ನಿರ್ದೇಶಕಿ ದಯಾಶೀಲ, ಬೆಂಗಳೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಸಂಧ್ಯಾ ಶೆಟ್ಟಿ, ತಾಲೂಕು ಯೋಜನಾಧಿಕಾರಿಯಾಗಿ ಅನಿತಾ ಶೆಟ್ಟಿ, ಸಮನ್ವಯ ಅಧಿಕಾರಿ ಲಾವಣ್ಯ , ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ಉಪನ್ಯಾಸಕರು ಆದ ರೂಪಶ್ರೀ ವಿಶ್ವನಾಥ ಮೇಲ್ವಿಚಾರಕರಾದ ಪ್ರೇಮ ಸೇರಿದಂತೆ ಇತರರು ಇದ್ದರು
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ