ಬೆಂಗಳೂರು: ಇಂಗ್ಲೆಂಡ್ ನ ಖ್ಯಾತ ಗಾಯಕ ಎಡ್ ಶೀರನ್ ಅನುಮತಿ ಇಲ್ಲದೆ ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ಹಿನ್ನೆಲೆ ಬೆಂಗಳೂರು ಪೊಲೀಸರು ತಡೆದಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಎಡ್ ಶೀರನ್ ಗ್ಲೋಬಲ್ ಪಾಪ್ ಸ್ಟಾರ್ ಆಗಿದ್ದು, ಇವರ ಮ್ಯೂಜಿಕ್ ಕನ್ಸರ್ಟ್ ಎಂದರೆ ಜನರು ಎಗ್ಗಿಲ್ಲದೆ ಸೇರುತ್ತಾರೆ.
ಬೆಂಗಳೂರಿನಲ್ಲಿ ಎಡ್ ಶೀರನ್ ಅವರ ತಂಡ ಅನೀರಿಕ್ಷಿತ ಪ್ರದರ್ಶನವನ್ನು ಹಮ್ಮಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು. ಆದರೆ ಬೆಂಗಳೂರು ಪೊಲೀಸರು ಎಡ್ ಶೀರನ್ ಕಾರ್ಯಕ್ರಮವನ್ನು ತಡೆದು ಎಡ್ ಶೀರನ್ ಗೆ ಸಪ್ರೈಸ್ ನೀಡಿದ್ದಾರೆ.
ಸದ್ಯ ಈ ಘಟನೆ ಪರ ವಿರೋಧಕ್ಕೆ ಕಾರಣವಾಗಿದೆ. ಅನುಮತಿ ಇಲ್ಲದೆ ವಿದೇಶಿ ಪ್ರಜೆಗಳು ಹೇಗಬೇಕಾದರೂ ರಸ್ತೆ ಬದಿಯಲ್ಲಿ ವರ್ತಿಸಬಹುದೇ? ಅಂತ ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಪೊಲೀಸರ ನಡೆಯ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx