ಮಧುಗಿರಿ : ಶಾಸಕ ಕೆ.ಎನ್.ರಾಜಣ್ಣನವರನ್ನು ಸಂಪುಟದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಮಿಡಿಗೇಶಿ ಗ್ರಾ.ಪಂ. ಸದಸ್ಯರು ರಾಜೀನಾಮೆ ನೀಡಿದ್ದು ಇಂದು ಇಡೀ ಗ್ರಾಪಂ ಪೂರ್ತಿ 11 ಸದಸ್ಯರು ಅಧ್ಯಕ್ಷರಾದಿಯಾಗಿ ವೈಯಕ್ತಿಕವಾಗಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ತಾಲೂಕಿನ ಮಿಡಿಗೇಶಿ ಹೋಬಳಿಯ ಮಿಡಿಗೇಶಿ ಗ್ರಾ.ಪಂ. ಆಡಳಿತ ಮಂಡಳಿಯೇ ಪೂರ್ತಿ ರಾಜೀನಾಮೆ ಪತ್ರವನ್ನು ಉಪವಿಭಾಗಾಧಿಕಾರಿಗಳ ಕಚೇರಿಗೆ ನೀಡಿದ್ದಾರೆ.
ಇದೇ ವೇಳೆ ಮಿಡಿಗೇಶಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್ ಎನ್ ರಾಜು ಮಾತನಾಡಿ, ಕಾಂಗ್ರೆಸ್ ಹೈ ಕಮಾಂಡ್ ರಾಜಣ್ಣನವರ ವಿಚಾರದಲ್ಲಿ ಆತುರಪಟ್ಟಿದೆ. ರಾಜಣ್ಣ ಇದ್ದರಷ್ಟೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅವರು ಹೇಳಿದ ಮಾತನ್ನು ತಿರುಚಿ ರಾಹುಲ್ ಗಾಂಧಿಯವರಿಗೆ ತಪ್ಪು ಮಾಹಿತಿ ನೀಡಿದ ಕಾರಣ ಕೆ.ಎನ್.ಆರ್. ವಜಾಗೊಂಡರು ಎಂದು ಆರೋಪಿಸಿದರು.
ಆದರೆ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಯವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಕೇಸು ಹಾಕಿಸಿದ್ದ ಅಮಿತ್ ಷಾ ಜೊತೆ ವೇದಿಕೆ ಹಂಚಿಕೊಂಡವರು, ಸದನದಲ್ಲಿ ಕಾಂಗ್ರೆಸ್ ವಿರೋಧಿಸುವ ಆರ್ ಎಸ್ ಎಸ್ ಗೀತೆಯನ್ನು ಹಾಡುವವರು ಹಾಗೂ ಇತರೆ ಒಳ ರಾಜಕೀಯ ಮಾಡುವ ಜೊತೆಗೆ ಕುಂಭ ಮೇಳವನ್ನು ವಿರೋಧಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಮಾತಿಗೂ ಬೆಲೆ ಕೊಡದೆ ಕುಂಭ ಮೇಳದಲ್ಲಿ ಕುಟುಂಬ ಸಮೇತ ಸ್ನಾನ ಮಾಡಿ ಬಂದ ಡಿಕೆಶಿಗೆ ಒಂದು ನ್ಯಾಯ. ರಾಜಣ್ಣನವರಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಹೇಳಿರುವಂತೆ ಕಾಂಗ್ರೆಸ್ ನಲ್ಲಿರುವ ಆರ್‌ಎಸ್‌ಎಸ್ ವಾದಿಗಳು ಬಿಜೆಪಿ ವಾದಿಗಳನ್ನು ಪಕ್ಷದಿಂದ ತಗೆಯಬೇಕು ಎಂದಿದ್ದರು.
ಅದರಂತೆ ರಾಹುಲ್ ಗಾಂಧಿ ಆ ಕೆಲಸವನ್ನು ಮಾಡಬೇಕು. ತಕ್ಷಣ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಮರೆತು ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ರವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಡಿಸಿಂ ಹುದ್ದೆಯಿಂದ ವಜಾಗೊಳಿಸಿ ಪಕ್ಷದಿಂದ ಉಚ್ಚಾಟಿಸಬೇಕೆಂದು ನಾವೆಲ್ಲ ಒತ್ತಾಯ ಮಾಡುತ್ತಿದ್ದೇವೆ ಎಂದರು.
ನಾಯಕರಾದ ರಾಜಣ್ಣನ ಬೆಂಬಲಕ್ಕೆ ನಾವಿದ್ದು ಆದ ಅನ್ಯಾಯ ಸರಿಪಡಿಸಬೇಕು. ಇಲ್ಲವಾದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ನಾವು ಕೆಎನ್‌ಆರ್ ಇದ್ದರಷ್ಟೆ ಕಾಂಗ್ರೆಸ್ ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಸುರೇಶ್. ವಿಜಯಕುಮಾರ್ ಹಾಗೂ ಊರಿನ ಗ್ರಾಮಸ್ಥರು ಮುಂತಾದವರು ಇದ್ದರು.
ವರದಿ: ಅಬೀದ್ ಮಧುಗಿರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC