ಮಳೆಗಾಲದಲ್ಲಿ ಪ್ರಕೃತಿ ಹಾಗೂ ಜಲಧಾರೆ ತಾಣಗಳ ಸೊಬಗು ನೋಡೋದೆ ಚೆಂದ. ಆದರೆ, ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಜಲಪಾತಗಳ ತವರೂರು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಲಾಗಿದೆ.
ಕರ್ನಾಟಕದ ಪ್ರಸಿದ್ಧವಾದ ಯಲ್ಲಾಪುರ ತಾಲೂಕಿನ ಸಾತೋಡ್ಡಿ ಜಲಪಾತ ವೀಕ್ಷಣೆಗೆ ನೀರಿನ ಹರಿವು ಹೆಚ್ಚಾದ ಕಾರಣ ಪ್ರವಾಸಿಗರಿಗೆ ಗುರುವಾರದಿಂದ ಮುಂದಿನ ಆದೇಶದವರೆಗೆ ಜಲಪಾತ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ.
ಈ ಕುರಿತು ಪ್ರವೇಶ ನಿರ್ಬಂಧದ ನಾಮಫಲಕ ಹಾಕಲಾಗಿದೆ. ಒಂದಷ್ಟು ಅವಘಡಗಳು ಸಂಭವಿಸುತ್ತಿವೆ. ಈ ನೀರಿನ ಝಳ ಜಾಸ್ತಿ ಇರುವಾಗ ಮತ್ತು ಅವಘಡಗಳಿಗೆ ಕಾರಣವಾಗುತ್ತದೆ. ಪ್ರವಾಸಿಗರು ನೀರಿಗಿಳಿದು ಅಪಾಯವನ್ನು ತಂದುಲೊಳ್ಳುತ್ತಾರೆನ್ನುವ ಕಾರಣಕ್ಕೆ ನಿಷೇಧ ಹೇರಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA