ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪನವರು ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ರವರ ಮನೆಗೆ ಭೇಟಿ ನೀಡಿದರು ಚಹಾ ಸೇವನೆ ಮಾಡಿ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪತ್ರಕರ್ತರ ಪ್ರಶ್ನೆ. ನೀವು ರಾಜೀನಾಮೆಯನ್ನು ಯಾವಾಗ ನೀಡುತ್ತೀರಿ?
ಉತ್ತರ: ನಾನು ಆಪಾದನೆಯಿಂದ ಮುಕ್ತನಾಗಬೇಕು ಎಂಬ ಒಂದೇ ಒಂದು ಉದ್ದೇಶದಿಂದ ಹಾಗೂ ನಮ್ಮ ಪಕ್ಷಕ್ಕೆ ಕಾರ್ಯಕರ್ತರಿಗೆ ಹಿರಿಯರಿಗೆ ಕಿರಿಕಿರಿ ಆಗಬಾರದೆಂದು ಮುಖ್ಯಮಂತ್ರಿಯವರ ಜೊತೆ ಮಾತನಾಡಿದ್ದೇನೆ ಈ ದಿನ (15.04.22)ರಂದು ಸಂಜೆ ಬೆಂಗಳೂರಿಗೆ ಹೋಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು.
ಪ್ರಶ್ನೆ: ನಿಮ್ಮ ಅಭಿಮಾನಿ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ ಇದಕ್ಕೆ ನೀವು ಏನು ಹೇಳುತ್ತೀರಿ?
ಉತ್ತರ: ಇಲ್ಲ ಅಭಿಮಾನಿಗಳಿಗೆ ನಾನು ಬುದ್ಧಿವಾದ ಹೇಳಿದ್ದೇನೆ. ಆ ರೀತಿ ಯಾರು ಮಾಡಿಕೊಳ್ಳುವುದಿಲ್ಲ ಆಪಾದನೆಯಿಂದ ಮುಕ್ತರಾಗಿರುವ ಮುಖ್ಯವಾಗಿದೆ ಎಂದರು.
ಪ್ರಶ್ನೆ: ಪ್ರಿಯಾಂಕ ಖರ್ಗೆಯವರು ಈ ಸರ್ಕಾರದಲ್ಲಿ ಇನ್ನೂ ನಾಲ್ಕು ಜನರ ಮೇಲೆ 40% ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ?
ಉತ್ತರ: ಅವರಿಗೆ ತಾಕತ್ತಿದ್ದರೆ ಸುಮ್ಮನೆ ಹೇಳುವ ಬದಲು ದಾಖಲೆ ಸಮೇತ ಯಾರು ಎಂದು ಹೆಸರನ್ನು ಹೇಳಲಿ. ಹೆಸರು ಹೇಳದೆ ಹೀಗೆ ಆರೋಪ ಮಾಡುವವರನ್ನು ಏನು ಎಂದು ಕರೆಯಬೇಕು? ಅವರು ಹೆಸರು ಹೇಳಿದರೆ ದಾಖಲೆ ನೀಡಿದರೆ ಸಂತೋಷ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5