ರೈತ ಕುಟುಂಬವೊಂದು ತುಂಬಿ ಹರಿಯುತ್ತಿರುವ ನದಿಯನ್ನು ಎತ್ತಿನಗಾಡಿಯಲ್ಲಿ ದಾಟಿ ಕೃಷಿ ಕೆಲಸ ಮುಗಿಸಿಕೊಂಡು ವಾಪಾಸ್ಸಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ತುಂಬಿ ಹರಿಯುವ ನದಿಯಲ್ಲಿ ಎತ್ತಿನಗಾಡಿ ದಾಟಿಸಿಕೊಂಡು ಜಮೀನಿಗೆ ರೈತ ಕುಟುಂಬವೊಂದು ಕೃಷಿ ಕೆಲಸಕ್ಕೆ ಹೋಗಿ ಬಂದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಇರುವ ಕುಮುದ್ವತಿ ನದಿಯಲ್ಲಿ ಈ ಕುಟುಂಬ ಹರಸಾಹಸ ಮಾಡಿದೆ. ಎತ್ತಿನಬಂಡಿಯಲ್ಲಿ ಏಳು ಜನ, ಬಂಡಿಯ ಮುಂದೆ ಒಬ್ಬ ಹೋಗಿ ಈ ಕುಟುಂಬ ಕೃಷಿ ಕೆಲಸ ಮಾಡಿದೆ ಎಂದು ತಿಳಿದು ಬಂದಿದೆ.
ಮಾಸೂರು-ಮೇದೂರು ಗ್ರಾಮದ ನಡುವೆ ತುಂಬಿ ಹರಿಯುತ್ತಿರುವ ಕುಮುದ್ವತಿಯಲ್ಲಿ ಎತ್ತಿನಬಂಡಿ ಮುಳುಗೋ ಹಂತದಲ್ಲಿದ್ರೂ ಈ ರೈತ ಕುಟುಂಬ ಪ್ರಯಾಣ ಬೆಳಸಿದೆ. ಜೀವದ ಹಂಗು ತೊರೆದು ಜಮೀನು ಕೆಲಸಕ್ಕೆ ಹೋಗಿ ಬಂದ ರೈತ ಕುಟುಂಬ ಸಾಹಸಕ್ಕೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ವಲ್ಪವೇ ಯಾಮಾರಿದರೂ ಈ ಎಂಟು ಜನ ನೀರು ಪಾಲಾಗ್ತಿದ್ದರು. ನದಿಯಲ್ಲಿ ದಾಟಿಕೊಂಡು ಹೋಗದಂತೆ ಸ್ಥಳೀಯರು ಹೇಳಿದರೂ ಸಹ ಅವರ ಮಾತಿಗೆ ಕಿವಿಗೊಡದೇ ನದಿಯಲ್ಲಿ ಪ್ರಯಾಣ ಬೆಳಸಿರುವುದು ಚರ್ಚೆಗೆ ಗ್ರಾಸವಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy