ಸರಗೂರು : ಸಂತರ ವಿಚಾರ ಹಾಗೂ ಸಾಧನೆಗಳನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡು ಯುವ ಪೀಳಿಗೆಗೆ ಪರಿಚಯಸಲು ಮುಂದಾಗಬೇಕು ಎಂದು ಭೋವಿ ಸಮಾಜದ ತಾಲ್ಲೂಕು ಅಧ್ಯಕ್ಷ ಹಾಗೂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಹೇಳಿದರು.
ತಾಲೂಕಿನ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು 853 ನೇ ಸಿದ್ದರಾಮೇಶ್ವರ ಜಯಂತಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರ ಪೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಶಿವಯೋಗಿ ಸಿದ್ಧರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳು ಮಾತ್ರ ಲಭಿಸಿವೆ. ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶಿವಯೋಗಿಗಳು ಶ್ರೇಷ್ಠ ವಚನಕಾರರಾಗಿದ್ದಾರೆ. ಬಸವಣ್ಣನವರು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದರು. ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು ಎಂದರು.
ಆಧ್ಯಾತ್ಮ ಪರಂಪರೆ ಹೊಂದಿರುವ ದೇಶದಲ್ಲಿ ದಿವ್ಯಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ನಾಗೇಂದ್ರ ಮಾತನಾಡಿ, 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು. ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಅವರು ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದರು.
ಮುಂದಿನ ತಿಂಗಳು ನಮ್ಮ ಸಮಾಜದ ಸ್ವಾಮಿಜೀ ಮತ್ತು ಶಾಸಕರ ದಿನಾಂಕವನ್ನ ಪಡೆದು ತಾಲ್ಲೋಕಿನಾದ್ಯಂತಹ ಸಮಾಜದ ಬಂಧುಗಳು ಸೇರಿ ವಿಜ್ರಂಭಣೆಯಿಂದ ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಗೌರವಅಧ್ಯಕ್ಷರಾದ ರಾಜಣ್ಣ, ಉಪಾಧ್ಯಕ್ಷ ರವಿಕುಮಾರ್, ಪುರಸಭೆ ಸದಸ್ಯ ಸೋಮಶೇಖರ್,ಪಪಂ ಮಾಜಿ ಸದಸ್ಯ ನಾಗೇಂದ್ರ, ಸಂಘಟನೆ ಕಾರ್ಯದರ್ಶಿ ರಘು, ವೆಂಕಟರಾಮ್,ಕಾರ್ಯದರ್ಶಿ ಕಂದಸ್ವಾಮಿ, ಖಜಾಂಚಿ ರಾಮಕೃಷ್ಣ,ಮುಖಂಡರು ಬಸಪ್ಪ, ವೆಂಕಟರಾಮು, ವೆಂಕಟರಾಮ, ಕೃಷ್ಣ ಭೋವಿ, ನಾಗರಾಜು, ಶೇಖರ್, ವೀರಭದ್ರ ಬೋವಿ, ಪ್ರಕಾಶ್,ಕಾಳಪ್ಪ, ಭೋಜಣ್ಣ, ಕೃಷ್ಣಪ್ಪ ,ಶಿವಪುರನಾಗರಾಜು, ರಘು ಹೊಮ್ಮರಗಳ್ಳಿ ,ಪಾಳ್ಯ ಶ್ರೀನಿವಾಸ, ನಾಗರಾಜು, ನಿಂಗಣ್ಣ, ನಾಗರಾಜು, ಉಪತಹಸೀಲ್ದಾರ್ ಮನೋಹರ್, ರವಿಚಂದ್ರ, ಚಂದ್ರ,ಮತ್ತು ಸಮಾಜದ ಮುಖಂಡರು ಸೇರಿದಂತೆ ಅಧಿಕಾರಿಗಳು ವರ್ಗದವರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx