ನಾಗಾಲ್ಯಾಂಡ್ ನಲ್ಲಿ ಕೇಂದ್ರ ಸರ್ಕಾರ ಎಎಫ್ ಎಸ್ ಪಿಎ ಕಾಯ್ದೆಯನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿಸಿದೆ. ಅಫ್ಸಾ ಕಾನೂನನ್ನು ಈ ವರ್ಷ ಸೆಪ್ಟೆಂಬರ್ 30 ರವರೆಗೆ 8 ಜಿಲ್ಲೆಗಳು ಮತ್ತು 21 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಸ್ತರಿಸಲಾಗಿದೆ.
AFSPA ಕಾಯಿದೆಯು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರವನ್ನು ನೀಡುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಕೇಂದ್ರ ಗೃಹ ಸಚಿವಾಲಯದ ಕ್ರಮ ಬಂದಿದೆ. 1958 ರ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (AFSPA) ಸೈನ್ಯಕ್ಕೆ ವಿಶೇಷ ಅಧಿಕಾರವನ್ನು ನೀಡುವ ಕಾನೂನು. AFSPA ಕಾಯಿದೆಯು ಸಶಸ್ತ್ರ ಪಡೆಗಳಿಗೆ ಪೂರ್ವ ವಾರಂಟ್ ಇಲ್ಲದೆ ಶೋಧಗಳನ್ನು ನಡೆಸಲು ಮತ್ತು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರನ್ನು ಬಂಧಿಸಲು ಅಧಿಕಾರ ನೀಡುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296