ಬೆಂಗಳೂರು: ಬೆಂಗಳೂರು-ಬ್ರಾಂಡೆಂಡ್ ಹೆಸರಲ್ಲಿ ನಕಲಿ ಬಟ್ಟೆ ಮಾಫೀಯಾ ನಗರದಲ್ಲಿ ನಡೆಯುತ್ತಿದೆ. ಹೆಸರಾಂತ ಬ್ರಾಂಡೆಂಡ್ ಹೆಸರಲ್ಲಿ ಬಟ್ಟೆ ತಯಾರು ಮಾಡ್ತಿದ್ದ ಫ್ಯಾಕ್ಟರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ವಿಲ್ಸನ್ ಗಾರ್ಡನ್ ಪೊಲೀಸ್ ರಿಂದ ಎರಡು ಫ್ಯಾಕ್ಟರಿ ಮೇಲೆ ದಾಳಿ ಮಾಡಿ ಲಕ್ಷಾಂತರ ಮೌಲ್ಯದ ಬಟ್ಟೆಗಳನ್ನ ಸೀಜ್ ಮಾಡಿದ್ದಾರೆ.
ಲೊಕಾಸ್ಟೆ, ಗಾಂಟ್, ಪೋಲೋ ಬಾರ್ಬೆರಿ ಸೇರಿದಂತೆ ಇನ್ನಿತರ ಹೆಸರಲ್ಲಿ ನಕಲಿ ಬಟ್ಟೆ ಅನುಮತಿ ಇಲ್ಲದೆ ಬ್ರಾಂಡೆಂಡ್ ಲೇಬಲ್ ಬಳಸುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಲಾಗಿದೆ.


