ವಕೀಲೆಯೊಬ್ಬರು ತನಗೆ ಜನರ ಗುಂಪೊಂದು ವೀಡಿಯೋ ಕಾಲ್ ನಲ್ಲಿ ವಿವಸ್ತ್ರಗೊಳಿಸಿ ಹೇಳಿ 10 ಲಕ್ಷ ರೂ. ವಂಚನೆ ಮಾಡಿರುವ ಕುರಿತು ದೂರು ನೀಡಿದ್ದಾರೆ.
ಎಪ್ರಿಲ್ 5 ರಂದು ಮುಂಬೈನಲ್ಲಿ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಎಂದು ಹೇಳಿಕೊಂಡ ಕೆಲವರು ನನ್ನನ್ನು ಸಂಪರ್ಕಿಸಿ, ನನ್ನ ಹೆಸರಿನಲ್ಲಿ ಡ್ರಗ್ಸ್ ಪ್ಯಾಕೇಜ್ ಸಿಂಗಾಪುರದಿಂ ರವಾನೆಯಾಗುತ್ತಿದೆ ಎಂದು ಹೇಳಿದ್ದು, ಮಾದಕ ವಸ್ತು ಪರೀಕ್ಷೆಗಾಗಿ ವೀಡಿಯೋ ಕರೆಯಲ್ಲಿ ವಿವಸ್ತ್ರಗೊಳ್ಳುವಂತೆ ಹೇಳಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇದು ಎರಡು ದಿನಗಳ ಕಾಲ ಮುಂದುವರಿದಿದ್ದು, ನಂತರ ಬ್ಲ್ಯಾಕ್ ಮೇಲ್ ಮಾಡಲು ಅವರು ಪ್ರಾರಂಭ ಮಾಡಿದ್ದು, ತಮ್ಮ ಖಾತೆಗೆ 10 ಲಕ್ಷ ರೂಪಾಯಿಗಳನ್ನು ವರ್ಗಾಯಿಸದಿದ್ದರೆ ವಿಡಿಯೋವನ್ನು ಆನ್ ಲೈನ್ ಮೂಲಕ ಅಪ್ ಲೋಡ್ ಮಾಡಲಾಗುವುದು ಎಂದು ಬೆದರಿಸಿದ್ದಾರೆ.
ಇದರಿಂದ ಬೆದರಿದ ವಕೀಲೆ ಅವರು ಹೇಳಿದ ಮೊತ್ತವನ್ನು ಖಾತೆಗೆ ಜಮಾ ಮಾಡಿದ್ದಾರೆ. ನಂತರ ಅವರು ಎ.7 ರಂದು ಪೊಲೀಸರಿಗೆ ದೂರನ್ನು ನೀಡಿದ್ದು, ಪೊಲೀಸರು ಸುಲಿಗೆ, ವಂಚನೆಗೆ ಸಂಬಂಧಪಟ್ಟಂತೆ ಐಟಿ ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


