ಆನೇಕಲ್: ಬೆಂಗಳೂರು ಹೊರವಲಯದ ಆನೆಕಲ್ ತಾಲೂಕಿನ ಗೌರೇನ ಹಳ್ಳಿಯಲ್ಲಿ ಪತಿಯೇ ತನ್ನ ಪತ್ನಿಯ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ನಡೆದಿದೆ.
ಚಾಂದ್ ಪಾಷಾ(45) ಎಂಬಾತ ತನ್ನ ಪತ್ನಿಯಾದ ನಾಜಿಯಾ ಬೇಗಂ (40) ಮೇಲೆ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಾಜಿಯಾ ಬೇಗಂ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಂದ್ ಪಾಷಾ ಮತ್ತು ನಾಜಿಯಾ ಬೇಗಂ ಹಲವು ವರ್ಷದ ಹಿಂದೆ ಮದುವೆಯಾಗಿದ್ದ ಇವರಿಗೆ ಆರಂಭದಿಂದಲೇ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. ಆಗಾಗ ಹೊಡೆಯುವುದು, ಮನೆಯಿಂದ ಹೊರಹಾಕುವ ಗಂಡನ ಕಿರಿಕಿರಿಯಿಂದ ನಾಜಿಯಾ ಬೇಸತ್ತಿದ್ದರು. ಆತ ಆಗಾಗ ಹೊಡೆಯುವುದು, ಮನೆಯಿಂದ ಹೊರಹಾಕುವ ಹಿಂಸೆ ನೀಡುತ್ತಿದ್ದ. ಆದರೆ ನಾಜಿಯಾ ಅದನ್ನೆಲ್ಲ ಸಹಿಸಿಕೊಂಡಿದ್ದರು.
ಇತ್ತೀಚೆಗೆ ಕೌಟುಂಬಿಕ ಕಲಹ ತಾರಕ್ಕಕ್ಕೇರಿ ಕೋಪಗೊಂಡ ಗಂಡ ತನ್ನ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದ. ರಾತ್ರಿ ಮಲಗಿದ್ದ ಪತ್ನಿಯ ಮೇಲೆ ನೀಚ ಪತಿಯು ಆಸಿಡ್ ದಾಳಿ ನಡೆಸಿದ್ದಾನೆ. ಮನೆಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆಸಿಡನ್ನೇ ಆತ ಆಕೆಯ ಮೇಲೆ ಎರಚಿದ್ದಾನೆ.
ಇದಾದ ಬಳಿಕ ಚಾಂದ್ ಪಾಷಾ ಬೈಕ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಸೇರಿ ನಾಜಿಯಾ ಅವರನ್ನು ಆನೇಕಲ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಯ್ಲೆಟ್ ಗೆ ಬಳಸುವ ಆಸಿಡ್ ಆಗಿದ್ದರಿಂದ ಸ್ವಲ್ಪ ದುರ್ಬಲವಾಗಿದೆ. ಹೀಗಾಗಿ ಆಕೆಯ ಪ್ರಾಣ ಉಳಿದಿದೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


