ಚಿಕ್ಕನಾಯಕನಹಳ್ಳಿ: ಹೇಮಾವತಿ ನೀರಿಗಾಗಿ ರೈತರು ಬೀದಿಗಿಳಿದಿದ್ದಾರೆ. ಸರ್ಕಾರಕ್ಕೆ 15 ದಿನಗಳ ಗಡುವನ್ನು ರೈತರು ನೀಡಿದ್ದಾರೆ. ತಾಲೂಕಿನ 26 ಕೆರೆಗಳಿಗೆ ನೀರು ಬಿಡಲೇಬೇಕೆಂದು ರೈತರು ಒತ್ತಾಯಿಸಿದರು.
ತಾಲೂಕಿನ ರೈತರು ಹಾಗೂ ದಲಿತ ಪರ ಸಂಘಟನೆಗಳು, ಕನ್ನಡ ರಕ್ಷಣಾ ವೇದಿಕೆ ಮತ್ತು ವಿವಿಧ ಸಂಘಟನೆಗಳು ಸೇರಿ ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿವೆ.
ನೂರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ರೈತ ಮಹಿಳೆಯರು ಖಾಲಿ ಬಿಂದಿಗೆ ಹಿಡಿದುಕೊಂಡು ಪ್ರತಿಭಟನೆಗೆ ಇಳಿದರು.
ರಸ್ತೆ ತಡೆಯಲು ಮುಂದಾದ ರೈತರನ್ನು ಪೊಲೀಸರು ಅಡ್ಡಗಟ್ಟಿ ಸ್ವಲ್ಪ ಸಮಯ ನೆಹರೂ ಸರ್ಕಲ್ ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ನಂತರ ತಹಶೀಲ್ದಾರ್ ಕಛೇರಿಗೆ ಪಾದಯಾತ್ರೆಯೊಂದಿಗೆ ಬಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q