ಮಧುಗಿರಿ: ರಾಜ್ಯದಲ್ಲಿ ರುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷರೂ ಗಳ ವರೆಗೂ ಸಾಲ ನೀಡಲಾಗುತ್ತದೆ
ಎಂದು ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿ
ಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ಬಿಜವರ ಗ್ರಾಮದಲ್ಲಿ
ಆಯೋಜಿಸಲಾಗಿದ್ದ ನೂತನ ಗೋದಾಮುಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿ,ಕ್ಷೇತ್ರದಲ್ಲಿನ ಪಹಣಿ ಹೊಂದಿರುವ ಎಲ್ಲಾರಿಗೂ ಜಾತಿ ಪಕ್ಷ ನೋಡದೆ ಸಾಲ ನೀಡಲಾಗಿದೆ.
ರಾಜ್ಯದ ಸಹಕಾರ ಸಂಘಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಹೊರಟಿರುವುದು ಕ್ರಾಂತಿಕಾರಕ ತೀರ್ಮಾನ
ಇದರಿಂದ ಅವಕಾಶ ವಂಚಿತರಿಗೆ ಅವಕಾಶ ದೊರೆಯುವ೦ತಾಗುತ್ತದೆ. ಹಾಲು ಉತ್ಪಾದಕ ಸಂಘಗಳಿಗೆ ಹಾಲು ಸರಬರಾಜು ಮಾಡುತ್ತಿದ್ದರು. ರಾಜ್ಯದಲ್ಲಿ ಅಂದಾಜು 85,000 ರೈತರಿಗೆ ಹಾಲು ಉತ್ಪಾದಕರ ಸಂಘದ ಸದಸ್ಯತ್ವ ನೀಡಿಲ್ಲ. ಈ ಹಿನ್ನಲೆ ಯಲ್ಲಿ ಅವರಿಗೆ ಸದಸ್ಯತ್ವ ನೀಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಸದಸ್ಯತ್ವ ಪಡೆಯುದಿದ್ದರೆ 5 ರೂ. ಪ್ರೋತ್ಸಾಹ ಧನ ಸಿಗುವುದಿಲ್ಲ ಇದೇ ಅಲ್ಲದೆ ಯಶಸ್ವಿನಿ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
ತಾಲೂಕಿನಲ್ಲಿ 1355 ಜನರ 4 ಕೋಟಿ 54 ಲಕ್ಷದ 94 ಸಾವಿರ ಸಾಲ ಮನ್ನಾ ಮಾಡಲಾಗಿದೆ.
ಉತ್ಪಾದಕರಿಗೆ 10 ದಿನಗಳಿಗೆ ಒಮ್ಮೆ 31ಕೋಟಿ 54 ಲಕ್ಷ ರೂ ನೀಡಲಾಗುತ್ತಿದೆ. ಈ ಹಿಂದೆ ಹಾಲು ಉತ್ಪಾದಕರ
ಹಾಲಿಗೆ ಉಪ್ಪು ನೀರು ಬೆರೆಸಲಾಗುತ್ತಿತ್ತು ಅದನ್ನು ನಿಯಂತ್ರಿಸಲಾಗಿದೆ.
ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಪೋಷಕರು ಮಕ್ಕಳನ್ನು ವಿದ್ಯೆಯಿಂದ ವಂಚಿತರನ್ನಾಗಿಸಬಾರದು ಎಂದರು.ಏಕಶಿಲಾ ಬೆಟ್ಟಕ್ಕೆ 2025 ಜೂನ್20ರಂದು ಕೇಬಲ್ ಕಾರ್ ಅಳವಡಿಸಲಾಗುವುದು ಎತ್ತಿನಹೊಳೆ ಯೋಜನೆ ಅಡಿಯಲ್ಲಿ ಒಂದು ವರ್ಷದಲ್ಲಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು
ಕೊಡಿಗೇನಹಳ್ಳಿ ಐಡಿ ಹಳ್ಳಿ ಹೋಬಳಿಗಳಲ್ಲಿ2013 – 18ರ ಅವಧಿಯಲ್ಲಿ ಚೆಕ್ ಡ್ಯಾಂನಿರ್ಮಿಸಿದ್ದರಿಂದ ಅಂತರ್ಜಲ ವೃದ್ಧಿಯಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಮೃತಪಟ್ಟ ರಾಸುಗಳ 82 ಜನ ರೈತರಿಗೆ 42.45 ಲಕ್ಷ ಪರಿಹಾರದ ಚೆಕ್ ಗಳನ್ನು ವಿತರಣೆ
ಮಾಡಲಾಯಿತು. ನಬಾರ್ಡ್ ಅಧಿಕಾರಿ ಕೀರ್ತಿ ಪ್ರಭಾ,ಕೆ.ಎಂ.ಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್‌ಬಾಬು, ಅಡಳಿತಾಧಿಕಾರಿ ಡಾ.ಜಿ.ಉಮೇಶ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸನ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ.ಮಂಜುನಾಥ್, ವಿಎಸ್‌ಎಸ್‌ಎನ್ ಅಧ್ಯಕ್ಷೆ ಸಿದ್ದಗಂಗಮ್ಮ ಅಜ್ಜಣ್ಣ, ಗ್ರಾ.ಪಂ. ಅಧ್ಯಕ್ಷೆ ಮಂಜಮ್ಮ ಗುಂಡಾನಾಯ್ಕ, ತುಮಲ್ ಮುಖ್ಯಸ್ಥ ರಂಜಿತ್.ಸಿ, ಡಿಸಿಸಿ ಬ್ಯಾಂಕ್‌ನ ಮೇಲ್ವಿಚಾರಕರಾದ ಎನ್.ರಾಮಕೃಷ್ಣ,ಪ್ರದೀಪ್ ಆರ್ ಹಾಗೂ ಸಂಘದ ನಿರ್ದೇಶಕರುಗಳು, ರೈತರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296