ತುಮಕೂರು: ನಫೇಡ್ ಮೂಲಕ ಕೊಬ್ಬರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಕೊಬ್ಬರಿ ಬೆಳೆಗಾರರು ನೋಂದಣಿ ಮಾಡಿಸಲು ಹಗಲು ರಾತ್ರಿ ಎನ್ನದೆ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ರೈತರು ಜಮಾಯಿಸಿರುವ ಘಟನೆ ಇಂದು ಕೂಡ ಮುಂದುವರಿದಿದೆ.
ನಿನ್ನೆಯಿಂದ ಕೊಬ್ಬರಿ ಖರೀದಿ ಪ್ರಕ್ರಿಯೆಗೆ ನೋಂದಣಿ ಆರಂಭಿಸಲಾಗಿದ್ದು ನಿನ್ನೆಯಂತೆ ಇಂದು ರಾತ್ರಿಯೂ ರೈತರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ತಿಪಟೂರು ಎಪಿಎಮ್ ಸಿ ಹಾಗೂ ಕರಡಾಳು ಎಪಿ ಎಮ್ ಸಿ ಯ ಮುಂದೆ ರೈತರ ಕ್ಯೂ ನಿಂತಿದ್ದಾರೆ.
ತಮ್ಮ ಚಪ್ಪಲಿ, ಶೂ…ಬ್ಯಾಗ್ ಗಳನ್ನು ಬಿಟ್ಟು ಸ್ಥಳ ಕಾಯ್ದಿರಿಸಿಕೊಂಡ ಕೊಬ್ಬರಿ ಬೆಳೆಗಾರರು, ನೋಂದಣಿ ಮಾಡಿಸಲು ಹರಸಾಹಸ ಪಡುತ್ತಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಘೋಷಣೆ ಮಾಡಿದ್ದರಿಂದ ಖರೀದಿಗೆ ನೋಂದಣಿ ಆರಂಭವಾಗಿದೆ.
ತುಮಕೂರು ಜಿಲ್ಲೆಯ ತೆಂಗು ಬೆಳೆಯುವಂತಹ ತಾಲೂಕುಗಳಾದ ತಿಪಟೂರು ತುರುವೇಕೆರೆ ತುಮಕೂರು ಚಿಕ್ಕನಾಯಕನಹಳ್ಳಿ ಹಾಗೂ ಗುಬ್ಬಿ ತಾಲೂಕು ಕೇಂದ್ರಗಳಲ್ಲಿ ಕೊಬ್ಬರಿ ಖರೀದಿಗೆ ಈಗಾಗಲೇ ಎಪಿಎಂಸಿಯಲ್ಲಿ ಖರೀದಿ ಪ್ರಕ್ರಿಯೆಯ ಆರಂಭವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


