ತುಮಕೂರು: ಪ್ರೊ.ಎಲ್.ಮಣಿಗಯ್ಯ ಅವರ “ಒಳಮೀಸಲಾತಿ ಒಲವು–ನಿಲುವು” ಪುಸ್ತಕದ ಬಿಡುಗಡೆ ಸಮಾರಂಭ ಫೆಬ್ರವರಿ 9, ಬೆಳಿಗ್ಗೆ 10:30ಕ್ಕೆ, ತುಮಕೂರಿನ ರವೀಂದ್ರ ಕಲಾ ನಿಕೇತನ ಸಭಾಂಗಣದಲ್ಲಿ ನಡೆಯಲಿದೆ.
ಈ ಸಮಾರಂಭವನ್ನು ಸಂಶೋಧನೆ ಪ್ರಕಾಶನ, ದವನಭೂಮಿಕ ಸಾಂಸ್ಕೃತಿಕ ಟ್ರಸ್ಟ್, ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಮತ್ತು ಪ್ರಕೃತಿ ಜನಸೇವಾ ಟ್ರಸ್ಟ್ ಏರ್ಪಡಿಸಿದ್ದು, ಬಾಬು ಜಗಜೀವನರಾಂ ಅಧ್ಯಯನ ಕೇಂದ್ರ (ಬೆಂಗಳೂರು) ನಿರ್ದೇಶಕ ಪ್ರೊ.ಗಂಗಾಧರ ಬಿ. ಕೃತಿ ಬಿಡುಗಡೆ ಮಾಡುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಮ.ಲ.ನ. ಮೂರ್ತಿ ವಹಿಸಲಿದ್ದಾರೆ. ಡಾ. ನಾಗಭೂಷಣ್ ಬಗ್ಗನಡು (ಸಹ ಪ್ರಾಧ್ಯಾಪಕ, ವಿವಿ ವಿಜ್ಞಾನ ಕಾಲೇಜು) ಇವರು ಕೃತಿ ವಿಮರ್ಶೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜನಪರ ಚಿಂತಕ ಕೆ. ದೊರೈರಾಜ್, ಕಥೆಗಾರ ತುಂಬಾಡಿ ರಾಮಯ್ಯ, ಸಾಹಿತಿ ಡಾ. ಓ. ನಾಗರಾಜು, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಯುವ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ, ಗ್ರಂಥಕರ್ತ ಎಲ್. ಮಣಿಗಯ್ಯ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎ.ಸಿ.ರಂಗಯ್ಯ, ಮಂಟೇಸ್ವಾಮಿ, ಡಾ.ರಘುಕುಮಾರ್, ಸಿದ್ದಲಿಂಗಸ್ವಾಮಿ ಹಿರೇಮಠ್, ಪಿ. ಮಹಿಮಾರಾಜು, ನಾಗರಾಜು ಗೂಳರಿವೆ, ಬಿ.ಜಿ. ಸಾಗರ್, ಕುಪ್ಪೂರು ಶ್ರೀಧರ, ಡಾ. ಎಲ್. ಮುಕುಂದ, ರಂಜನ್ ಅವರನ್ನು ಸನ್ಮಾನಿಸಲಾಗುವುದು.
ಸಾಹಿತ್ಯಾಸಕ್ತರು, ಅಧ್ಯಾಪಕರು, ವಿದ್ಯಾರ್ಥಿಗಳು, ಸಾಹಿತ್ಯ ಪ್ರೇಮಿಗಳು, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗ್ರಂಥಕರನ್ನು ಅಭಿನಂದಿಸುವಂತೆ ಕೋರಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4