ಬೆಂಗಳೂರು: ನಾಯಿ ಬೆನ್ನಟ್ಟಿದ್ದ ಕಾರಣಕ್ಕೆ ವೃದ್ಧರೊಬ್ಬರ ಜೊತೆ ಜಗಳ ತೆಗೆದು ಚಾಕುವಿನಿಂದ ಇರಿಯಲಾಗಿದ್ದು, ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಾಜಿನಗರ ನಿವಾಸಿ ಬಾಲಸುಬ್ರಹ್ಮಣ್ಯ (62) ಅವರು ಚಾಕು ಇರಿತದಿಂದ ಗಾಯಗೊಂಡಿದ್ದಾರೆ. ‘ಕೃತ್ಯ ಎಸಗಿದ್ದ ಆರೋಪದಡಿ ಹುಲಿಯೂರು ದುರ್ಗದ ಎಚ್. ರಾಜುನನ್ನು (57) ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


