ಬೆಂಗಳೂರು: ಅಪಹರಣ ಪ್ರಕರಂಕ್ಕೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಯೊಂದರ ಅಧ್ಯಕ್ಷ ಸೇರಿದಂತೆ ಆರು ಜನರ ವಿರುದ್ಧ ಇಲ್ಲಿನ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಮಂಜುನಾಥ್ ಎಂಬಾತನನ್ನು ಅಪಹರಿಸಿದ್ದ ಆರೋಪದಡಿ ಕನ್ನಡ ಪರ ಸಂಘಟನೆಯೊಂದರ ಅಧ್ಯಕ್ಷ ಪ್ರಕಾಶ್, ಮಂಜುಳಾ ಎಂಬಾಕೆ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್ ಉದ್ಯೋಗಿಯಾಗಿರುವ ಮಂಜುನಾಥ್, ಆರೋಪಿ ಮಂಜುಳಾ ಬಳಿ 8 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ವಾಪಸ್ ನೀಡಲಾಗದಿದ್ದಾಗ ಮಂಜುನಾಥ್ ವಿರುದ್ಧ ಮಂಜುಳಾ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.
ಎ.4ರಂದು ಕೊರಿಯರ್ ಬಂದಿರುವುದಾಗಿ ಮಂಜುನಾಥ್ ಗೆ ಕರೆ ಮಾಡಿದ್ದ ಆರೋಪಿಗಳು, ಶಂಕರಮಠ ರಸ್ತೆಯ ಬಳಿ ಕರೆಸಿಕೊಂಡಿದ್ದಾರೆ. ಈ ವೇಳೆ ಮಂಜುಳಾ ಸೇರಿದಂತೆ ಕೆಲ ಮಹಿಳೆಯರು ಕಾರಿನಲ್ಲಿ ಬಂದು ಮಂಜುನಾಥ್ ಅವರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರಿನಲ್ಲಿದ್ದ ಪ್ರಕಾಶ್ ಮತ್ತು ಆತನ ಚಾಲಕ ವೆಂಕಟಾಚಲಪತಿ, ಮಹಿಳೆಯರೊಂದಿಗೆ ಸೇರಿ ತನ್ನ ಕಚೇರಿಗೆ ಕರೆದೊಯ್ದು ಥಳಿಸಿದ್ದಾರೆ. ಬಳಿಕ ಹಣ, ಮನೆ ದಾಖಲೆಗಳನ್ನು ಕಸಿದುಕೊಂಡಿದ್ದಾರೆ. ನಂತರವೂ ಸಹ ಆರೋಪಿಗಳು ಕರೆ ಮಾಡಿ ಬೆದರಿಕೆ ಹಾಕುತ್ತಿರುವುದರಿಂದ ತನಗೆ ಜೀವಭಯವಿದೆ ಎಂದು ಮಂಜುನಾಥ್ ದೂರಿದ್ದಾರೆ.
ಮಂಜುನಾಥ್ ನೀಡಿದ್ದ ದೂರಿನನ್ವಯ ಸದ್ಯ ಮಂಜುಳಾ, ಪ್ರಕಾಶ್, ವೆಂಕಟಾಚಲಪತಿ ಸೇರಿ ಆರು ಮಂದಿಯ ವಿರುದ್ಧ ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


