ಬೆಂಗಳೂರಿನ ಎಎಸ್ ಸಿ ಸೆಂಟರಿನಿಂದ ಅಗ್ನಿವೀರರ ಮೊದಲ ಬ್ಯಾಚ್ ತರಬೇತಿಯನ್ನು ಪೂರ್ಣಗೊಳಿಸಿತು. ಅಗ್ನಿಪಥ್ ಯೋಜನೆಯಡಿ ಬೆಂಗಳೂರಿನ ಆರ್ಮಿ ಸರ್ವಿಸ್ ಕಾರ್ಪ್ಸ್ ಕೇಂದ್ರ ಸಶಸ್ತ್ರ ಪಡೆಗಳ ಮೂರು ಸೇವೆಗಳಿಗೆ ಸೈನಿಕರ ನೇಮಕಾತಿಗಾಗಿ 2022ರ ಜೂನ್ 16ರಂದು ಭಾರತ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಅನುಮೋದನೆಗೊಳಿಸಿತ್ತು.
ಸೆಂಟರ್ ನಲ್ಲಿ(ಉತ್ತರ) ಮೊದಲ ಬ್ಯಾಚಿನ 113 ಅಗ್ನಿವೀರರು ತರಬೇತಿ ಪೂರ್ಣಗೊಳಿಸಿದ್ದಾರೆ. ಯೋಜನೆಯ ಭಾಗವಾಗಿ ಇದೇ ವರ್ಷ ಜನವರಿ 2023 ರಿಂದ ಪ್ರಾರಂಭವಾದ ತರಬೇತಿಯಲ್ಲಿ ಆಗಸ್ಟ್ 5 ರ ವರೆಗೆ 85 ಅಗ್ನಿವೀರರು (ಎಂಟಿ) ಉತ್ತೀರ್ಣರಾಗಿ ಹೊರಹೊಮ್ಮಿದ್ದಾರೆ.
ಬೆಂಗಳೂರಿನಲ್ಲಿರುವ ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್ (ಉತ್ತರ) ಭಾರತೀಯ ಸೇನೆಗಾಗಿ ಅನಿಮಲ್ಸ್ ಮತ್ತು ಸ್ಟೋರ್ ಹ್ಯಾಂಡ್ಲರ್ ಗಳು, ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ ಡ್ರೈವರ್ ಗಳು ಸೇರಿದಂತೆ ವಿವಿಧ ತರಬೇತಿ ನೀಡುವ ಪ್ರಮುಖ ಸಂಸ್ಥೆಯಾಗಿದೆ.
ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್(ಉತ್ತರ)- 1 ಎಟಿಸಿಯ ಕಮಾಂಡೆಂಟ್, ಬ್ರಿಗೇಡಿಯರ್ ತೇಜ್ ಪಾಲ್ ಸಿಂಗ್ ಮಾನ್ ಶನಿವಾರ ಅಗ್ನಿವೀರರು ತರಬೇತಿ ಮತ್ತು ಉತ್ತೀರ್ಣರಾದವರ ಪರೇಡ್ ವೀಕ್ಷಿಸಿದರು.
ಬಳಿಕ ತಮ್ಮ ಮಾತನಾಡಿದ ಅವರು ‘ಇಮಾಂದಾರ್, ವಫಾದಾರ್ ಮತ್ತು ಬಹಾದ್ದೂರ್’ ಸೈನಿಕ ನೀತಿಯನ್ನು ಅಳವಡಿಸಿಕೊಳ್ಳುವಂತೆ ಯುವ ಸೈನಿಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅಗ್ನಿವೀರರ ಪೋಷಕರು ಭಾಗಿಯಾಗಿದ್ದರು. ಇದೇ ವೇಳೆ ರಾಷ್ಟ್ರ ಸೇವೆಗಾಗಿ ಸೇನೆ ಸೇರಲು ಅಸಂಖ್ಯಾತ ಧೀರರನ್ನು ಪ್ರೋತ್ಸಾಹಿಸಿದ ಎಲ್ಲಾ ಪೋಷಕರಿಗೆ ಅವರ ಉದಾತ್ತತೆಯನ್ನು ಗುರುತಿಸುವುದರ ಸಂಕೇತವಾಗಿ ಭಾರತೀಯ ಸೇನೆಯ ಪ್ರತಿಷ್ಠಿತ ಗೌರವ ಪದಕವನ್ನು ನೀಡಿ ಗೌರವಿಸಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


