ಪುಣೆ: ಗುಯಿಲಿನ್–ಬಾರೆ ಸಿಂಡ್ರೋಮ್ (ಜಿಬಿಎಸ್) ಸೋಂಕಿಗೆ ಒಳಗಾದ ಶಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ನಡೆದಿದೆ.
ಮಹಾರಾಷ್ಟ್ರದಲ್ಲಿ ಈ ಸೋಂಕಿಗೆ ಬಹುಶಃ ಮೊದಲ ಸಾವು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಪುಣೆಯಲ್ಲಿ ನರ ಅಸ್ವಸ್ಥತೆ ರೋಗಿಗಳ ಸಂಖ್ಯೆ 100 ದಾಟಿದೆ.
ಸೋಲಾಪುರದ ಮೂಲದ ವ್ಯಕ್ತಿ ಪುಣೆಗೆ ಬಂದಿದ್ದರು. ಅಲ್ಲಿ ಅವರಿಗೆ ಈ ಕಾಯಿಲೆ ತಗುಲಿದೆ ಎಂದು ಶಂಕಿಸಲಾಗಿದೆ.
ಆದರೆ ಇದರ ಬಗ್ಗೆ ಹೆಚ್ಚಿನ ವಿವರಗಳನ್ನುನೀಡಿಲ್ಲ ಪುಣೆಯಲ್ಲಿ ಪ್ರಸ್ತುತ ಜಿಬಿಎಸ್ ಪ್ರಕರಣಗಳ ಸಂಖ್ಯೆ 101 ಕ್ಕೆ ಏರಿದೆ, ಇದರಲ್ಲಿ 68 ಪುರುಷರು ಮತ್ತು 33 ಮಹಿಳೆಯರು ಇದ್ದಾರೆ. ಈ ಪೈಕಿ 16 ರೋಗಿಗಳು ವೆಂಟಿಲೇಟರ್‌ನಲ್ಲಿದ್ದಾರೆ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4