ಸರಗೂರು: ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಆದಿ ಕರ್ನಾಟಕ ಮಹಾಸಭಾವು ನೂತನ ತಾಲೂಕು ಸರಗೂರಿನಲ್ಲಿಯೂ ಅಸ್ತಿತ್ವಕ್ಕೆ ಬಂದಿದ್ದು, ಮಹಾಸಭಾವು ಎರಡನೇ ಅವಧಿಗೆ ತನ್ನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನರಾಜಣ್ಣ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಮಹಾಸಭಾದ ಸಭೆಯಲ್ಲಿ ಮಾತನಾಡಿದ ಅವರು, ಗೌರವಾಧ್ಯಕ್ಷರಾಗಿ ಇದಿಯಪ್ಪ, ಉಪಾಧ್ಯಕ್ಷರಾಗಿ ಪುಟ್ಟಸ್ವಾಮಿ, ಚಿನ್ನಣ್ಣ, ಕಾಳಸ್ವಾಮಿ, ನಾಗೇಂದ್ರ, ಬಿಡಗಲು ಶಿವಣ್ಣ, ಪ್ರದಾನ ಕಾರ್ಯದರ್ಶಿ ಹಾದನೂರು ಪ್ರಕಾಶ್, ಖಜಾಂಚಿಯಾಗಿ ಲಂಕೆ ಶ್ರೀನಿವಾಸ್, ಸಹಕಾರ್ಯದರ್ಶಿಯಾಗಿ ಸೂರ್ಯಕುಮಾರ್, ನಿರ್ದೇಶಕರಾಗಿ ಹಾಲಯ್ಯ, ವೆಂಕಟಾಚಲ, ಕೂಡಗಿ ಗೋವಿಂದರಾಜು, ಸಣ್ಣಪಾಪ, ಕೆ.ಗೋವಿಂದ ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಮಹಾಸಭಾವು ಜನಾಂಗದ ಅಭಿವೃದ್ಧಿ, ತಾಲೂಕು ಅಭಿವೃದ್ಧಿಯೊಂದಿಗೆ ಇತರೆ ಜನಾಂಗದವರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡು ಸಮಾಜವನ್ನು ಮುಂಚೂಣಿಗೆ ತರುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಸಮಾಜದ ನೀಡಲಾದ ಜವಾಬ್ದಾರಿಯನ್ನು ಅರಿತು ಕಪ್ಪು ಚುಕ್ಕಿ ಬರದಂತೆ ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡಲಾಗುವುದು. ಜನರನ್ನು ಜಾಗೃತಿ ಮೂಡಿಸಲಾಗುವುದು ಎಂದರು.
ಸುಪ್ರೀಂ ಕೋರ್ಟ್ ಕಲಾಪ ನಡೆಯುವಾಗ ವಕೀಲನೋರ್ವ ನ್ಯಾಯಮೂರ್ತಿಗಳಾದ ಬಿ.ಎಸ್.ಗವಾಯಿ ಅವರ ಮೇಲೆ ಶೂ ಎಸೆದಿರುವುದನ್ನು ಖಂಡಿಸಿ ಆದಿ ಕರ್ನಾಟಕ ಮಹಾಸಭಾದಿಂದ ಅ.13ರಂದು ಪಟ್ಟಣದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ನಾಗರಾಜು, ಜಿಪಂ ಮಾಜಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ ನಿಂಗರಾಜು, ಮಹೇಂದ್ರ ಹೂವಿನಕೊಳ, ಲೋಕೇಶ್, ಗ್ರಾಮೀಣ ಮಹೇಶ್, ಅಣ್ಣಯ್ಯಸ್ವಾಮಿ, ಲಕ್ಷ್ಮಣ, ಕುಮಾರ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC