ಮೊನ್ನೆಯಷ್ಟೇ ನಟಿ ತ್ರಿಷಾ ಬಗ್ಗೆ ವ್ಯಕ್ತಿಯೊಬ್ಬರು ವಿವಾದದ ಹೇಳಿಕೆ ನೀಡಿದ್ದ ಭಾರಿ ಸುದ್ದಿಯಾಗಿತ್ತು. ಇದೀಗ ನಟಿ ಬಗ್ಗೆ ಮತ್ತೊಂದು ವಿವಾದದ ಹೇಳಿಕೆಯೊಂದು ಬಾರಿ ವೈರಲ್ ಆಗುತ್ತಿದೆ. ಯಾಕೋ ಏನೋ ನಟಿ ತ್ರಿಷಾ ಮೌನವಾಗಿದ್ದರೂ ಕೂಡ ನಟಿ ಬಗ್ಗೆ ಬೇಡ ಬೇಡವೆಂದರೂ ಈ ವಿವಾದಗಳು ಬೆನ್ನಟ್ಟಿ ಬರ್ತಿವೆ.
ಹೌದು,ಕೆಲ ದಿನಗಳ ಹಿಂದಷ್ಟೆ ನಟ ಮನ್ಸೂರ್ ಅಲಿ ಖಾನ್ ಅಸಭ್ಯವಾದ ಹೇಳಿಕೆ ನೀಡಿ, ಕ್ಷಮೆ ಕೇಳಿದ್ರು. ಈಗ ನಟಿ ತ್ರಿಷಾ ಬಗ್ಗೆ ಎಐಎಡಿಎಂಕೆ ಪಕ್ಷದ ಮಾಜಿ ನಾಯಕ ಎ.ವಿ. ರಾಜು ಅಸಹ್ಯಕರ ಹೇಳಿಕೆ ನೀಡಿದ್ದಾರೆ. ರಾಜು ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಪಶ್ಚಿಮ ಸೇಲಂನ ಶಾಸಕ ಜಿ ವೆಂಕಟಚಲಂ ಅವರನ್ನು ಟೀಕಿಸುವ ಭರದಲ್ಲಿ ತ್ರಿಷಾ ಹೆಸರನ್ನು ಎಳೆದು ತಂದಿದ್ದಾರೆ. ಆ ಹಿರಿಯ ರಾಜಕಾರಣಿಗಾಗಿ ತ್ರಿಷಾಗೆ ದುಡ್ಡು ಕೊಟ್ಟು ನಮ್ಮ ರೆಸಾರ್ಟ್ ಕರೆಸಿಕೊಂಡಿದ್ದೆ ಎಂಬರ್ಥ ಹೇಳಿಕೆ ನೀಡಿದ್ದಾರೆ.
2016ರಲ್ಲಿ ಸಿಎಂ ಜಯಲಲಿತಾ ಕೊನೆಯುಸಿರೆಳೆದ ನಂತರ ಶಾಸಕರು ಕೂವತ್ತೂರು ರೆಸಾರ್ಟ್ಗೆ ಶಿಫ್ಟ್ ಆಗಿದ್ದರು. ಈ ಕೂವತ್ತೂರು ರೆಸಾರ್ಟ್ ಕಾಂಚಿಪುರಂ ಜಿಲ್ಲೆಯಲ್ಲಿದೆ. ತನ್ನ ಬೆಂಬಲಕ್ಕೆ ನಿಲ್ಲುವಂತೆ ಎಡಪ್ಪಾಡಿ ಪಳನಿಸ್ವಾಮಿ ರೆಸಾರ್ಟ್ನಲ್ಲಿ ಎಲ್ಲಾ ವ್ಯವಸ್ಥೆ ಮಾಡಿದ್ದರು. ಯಾವ ನಾಯಕರಿಗೆ ಯಾವ ನಟಿ ಬೇಕು ಎಂದು ಶಾಸಕರಾಗಿದ್ದ ನಟ ಕರುಣಾಸ್ ನೋಡಿಕೊಳ್ಳುತ್ತಿದ್ದರು. ಅವರೆಲ್ಲಾ ರೆಸಾರ್ಟ್ನಲ್ಲಿ ಏನು ಮಾಡುತ್ತಾರೆ ಅಂತ ನೋಡಲು ಹೋಗಿದ್ದೆ. ಸೇಲಂ ಪಶ್ಚಿಮ ಕ್ಷೇತ್ರದ ಶಾಸಕರಾಗಿದ್ದ ವೆಂಕಟಾಚಲಂ ಕೂಡ ರೆಸಾರ್ಟ್ನಲ್ಲಿದ್ದರು. ನನಗೆ ಯುವ ನಟಿಯೇ ಬೇಕು ಅಂತ ವೆಂಕಟಾಚಲಂ ಕೇಳಿದ್ದರು. ನನಗೆ ತ್ರಿಷಾನೇ ಬೇಕು ಅಂತ ಒಂಟಿ ಕಾಲಿನಲ್ಲಿ ನಿಂತಿದ್ದರು. ಶಾಸಕರಾಗಿದ್ದ ವೆಂಕಟಾಚಲಂ ಮದ್ಯ ಸೇವನೆ ಮಾಡಲ್ಲ. ನನಗೆ ಚಿಕ್ಕ ಹುಡುಗಿ ನಟಿ ತ್ರಿಷಾ ಬೇಕು ಅಂತ ಹಠ ಮಾಡಿದ್ದರು. ಯಾಕೆ ಅಂತ ಕೇಳಿದ್ರೆ, ಜೀವನದಲ್ಲಿ ಇದೊಂದನ್ನೇ ಅನುಭವಿಸುತ್ತೇನೆ. ಬಳಿಕ ನಟಿ ತ್ರಿಷಾಗೆ 25 ಲಕ್ಷ ರೂ ನೀಡಿ ರೆಸಾರ್ಟ್ಗೆ ಕರೆದುಕೊಂಡು ಬಂದರು. ಅಷ್ಟಕ್ಕೆ ನಾವು ಅಲ್ಲಿಂದ ಊಟ ಮಾಡಿ ಎದ್ದು ಬಂದೆವು. ಇದಕ್ಕೆಲ್ಲಾ ಎಡಪ್ಪಾಡಿ ಪಳನಿಸ್ವಾಮಿ ಖರ್ಚು ಮಾಡಿದ್ದಾರೆ. ಸಾಕಷ್ಟು ನಟಿಯರ ಜತೆ ಕೂವತ್ತೂರು ರೆಸಾರ್ಟ್ನಲ್ಲಿ ಶಾಸಕರು ಮಜಾ ಮಾಡಿದ್ದಾರೆ. ಅವರ ಹೆಸರನ್ನೆಲ್ಲಾ ಇಲ್ಲಿ ಹೇಳಲು ಆಗಲ್ಲ. ಆ ನಟಿಯರು ಅವರ ಆಸೆಯನ್ನೆಲ್ಲಾ ಈಡೇರಿಸಿದರು’ –ಎ.ವಿ. ರಾಜು- ಎಐಎಡಿಎಂಕೆ ಮಾಜಿ ಮುಖಂಡ
ಎ.ವಿ ರಾಜು ನೀಡಿದ ಈ ಹೇಳಿಕೆಯ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ವಿವಾದ ಸಂಬಂಧ ನಟಿ ತ್ರಿಷಾ ಮಾತನಾಡಿದ್ದು, ಕಾನೂನಿನ ಮೂಲಕವೇ ಉತ್ತರ ನೀಡ್ತೀನಿ ಅಂತ ಗುಡುಗಿದ್ದಾರೆ.
ಮಾಧ್ಯಮಗಳ ಗಮನ ಸೆಳೆಯಲು ನೀಚ ಜನರು ಯಾವುದೇ ಹಂತಕ್ಕೆ ಬೇಕಾದರೂ ಇಳಿಯಲು ತಯಾರಾಗಿರುವುದು ಅಸಹ್ಯಕರ. ಕಾಮೆಂಟ್ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ತೇನೆ. ಏನು ಹೇಳಬೇಕು ಮತ್ತು ಏನು ಮಾಡಬೇಕೆಂದು ನನ್ನ ಲೀಗ್ ತಂಡ ನೋಡಿಕೊಳ್ಳಲಿದೆ -ತ್ರಿಷಾ ಕೃಷ್ಣನ್, ನಟಿ
ಇನ್ನು, ತ್ರಿಷಾ ಕುರಿತು ನೀಡಿದ್ದ ಹೇಳಿಕೆ ತೀವ್ರ ಸ್ವರೂಪಕ್ಕೆ ತಿರುಗಿದ ಹಿನ್ನೆಲೆ ಎವಿ ರಾಜು, ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಯಾರೋ ಒಬ್ರು ಹೇಳಿದ್ದನ್ನ ಹೇಳಿದ್ದಾಗಿ ಮಾತು ಬದಲಿಸಿದ್ದಾರೆ. ಒಟ್ಟಾರೆ, AIADMK ಪಕ್ಷದೊಳಗಿನ ಗಲಾಟೆಗೆ ನಟಿ ತ್ರಿಷಾ ಕೃಷ್ಣನ್ ಪರದಾಡಬೇಕಾದ ಪ್ರಸಂಗ ಎದುರಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


