ಭಾರತೀಯ ಜನತಾ ಪಾರ್ಟಿ ಶಾಸಕರು ಅಸಮಾಧಾನಗೊಂಡ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಜೊತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಮಾಲೋಚನೆ ನಡೆಸಿದ್ದಾರೆ.
ಶಾಸಕರ ಅಸಮಾಧಾನ ಕುರಿತು ವರಿಷ್ಠರ ಗಮನಕ್ಕೆ ತರಲು ಚಿಂತನೆ ನಡೆದಿದೆ. ಅಸಮಾಧಾನಿತ ಶಾಸಕರಾದ S.T.ಸೋಮಶೇಖರ್, ಶಿವರಾಂ ಹೆಬ್ಬಾರ್, ಇಬ್ಬರನ್ನೂ ಸಮಾಧಾನಿಸುವ ಜವಾಬ್ದಾರಿ ಬಸವರಾಜ ಬೊಮ್ಮಾಯಿ ಹೆಗಲಿಗಿದ್ದು ಉಭಯ ಶಾಸಕರು ಇನ್ನೆರಡು ದಿನಗಳಲ್ಲಿ ಬೊಮ್ಮಾಯಿ ಭೇಟಿ ಮಾಡಲಿದ್ದಾರೆ.


