nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ | ಡಿ.1, 2ಕ್ಕೆ ಶ್ರೀ ಹನುಮ ಜಯಂತಿ ಆಚರಣೆ

    November 25, 2025

    ಸ್ಕೌಟ್ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಶಾ ಪ್ರಸನ್ನ ಕುಮಾರ್ ಆಯ್ಕೆ

    November 25, 2025

    ಕರ್ನಾಟಕ ರಣಧೀರರ ವೇದಿಕೆ: ಅದ್ಧೂರಿ ಕನ್ನಡ ರಾಜ್ಯೋತ್ಸವ, ತಾಯಿ ಭುವನೇಶ್ವರಿ ಹಬ್ಬ

    November 25, 2025
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ | ಡಿ.1, 2ಕ್ಕೆ ಶ್ರೀ ಹನುಮ ಜಯಂತಿ ಆಚರಣೆ
    • ಸ್ಕೌಟ್ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಶಾ ಪ್ರಸನ್ನ ಕುಮಾರ್ ಆಯ್ಕೆ
    • ಕರ್ನಾಟಕ ರಣಧೀರರ ವೇದಿಕೆ: ಅದ್ಧೂರಿ ಕನ್ನಡ ರಾಜ್ಯೋತ್ಸವ, ತಾಯಿ ಭುವನೇಶ್ವರಿ ಹಬ್ಬ
    • ಸಹಾಯಧನ ಸೌಲಭ್ಯಕ್ಕಾಗಿ ಮೀನುಗಾರರಿಂದ ಅರ್ಜಿ ಆಹ್ವಾನ
    • ಕೊಳೆಗೇರಿಗಳು ನವನಗರ ಆಗಬೇಕು: ಪ್ರಾಧ್ಯಾಪಕ ಪ್ರೊ.ಪ್ರಕಾಶ್ ಎಂ. ಶೇಟ್
    • ನವೆಂಬರ್ 30ರಂದು ಕನ್ನಡ ರಾಜ್ಯೋತ್ಸವ ಆಚರಣೆ: ಆಟೋ ಚಾಲಕರಿಗೆ ಅಪಘಾತ ವಿಮಾ ಸೌಲಭ್ಯ
    • ತುಮಕೂರು | ನವೆಂಬರ್ 26ರಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ
    • “ತಂಬಾಕು ಸೇವನೆಯಿಂದ ಯುವ ಜನತೆ ದೂರವಿರಿ”: ತಂಬಾಕು ಮುಕ್ತ ಯುವ ಅಭಿಯಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪವರ್ ಟಿವಿ ರಾಕೇಶ್ ಶೆಟ್ಟಿ ವಿರುದ್ಧ ರೌಡಿ ಶೀಟರ್ ಓಪನ್ ಮಾಡಲು ಮಾಜಿ ಪೊಲೀಸ್ ಅಧಿಕಾರಿ ಮನವಿ
    ರಾಜ್ಯ ಸುದ್ದಿ June 29, 2024

    ಪವರ್ ಟಿವಿ ರಾಕೇಶ್ ಶೆಟ್ಟಿ ವಿರುದ್ಧ ರೌಡಿ ಶೀಟರ್ ಓಪನ್ ಮಾಡಲು ಮಾಜಿ ಪೊಲೀಸ್ ಅಧಿಕಾರಿ ಮನವಿ

    By adminJune 29, 2024No Comments3 Mins Read
    geresh

    ಹೈಕೋರ್ಟ್ ನಿಂದ ಕನ್ನಡದ ಖಾಸಗಿ ಸುದ್ದಿ ವಾಹಿನಿ ಪವರ್ ಟಿವಿಯನ್ನು ಬಂದ್ ಮಾಡುವಂತೆ ಆದೇಶ ಮಾಡಿದ ಬೆನ್ನಲ್ಲೇ ಮಾಲೀಕ ರಾಕೇಶ್ ಶೆಟ್ಟಿ ವಿರುದ್ಧ ರೌಡಿ ಶೀಟರ್ ಓಪನ್ ಮಾಡುವಂತೆ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣನವರ ಆಗ್ರಹಿಸಿದ್ದಾರೆ.

    ಬೆಂಗಳೂರಿನ ಪ್ರೆಸ್ ಕ್ಲಪ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, Power Tv ಚಾನೆಲ್ ನ ಮುಖ್ಯಸ್ಥ ಎಂದು ಹೇಳಿಕೊಂಡಿದ್ದ ರಾಕೇಶ ಶೆಟ್ಟಿ ಎಂಬ ವ್ಯಕ್ತಿ ದೃಶ್ಯಮಾಧ್ಯಮ ದುರುಪಯೋಗಪಡಿಸಿಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದು ಮಾತ್ರವಲ್ಲದೆ, ಪರವಾನಿಗೆ ಇಲ್ಲದೇ ಒಂದು satellite ಚಾನೆಲ್ ನಡೆಸುತ್ತಿದ್ದ ಕಾರಣ ದಿನಾಂಕ: 25-06-2024 ರಂದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ Power Tv ಪ್ರಸಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ ಎಂದಿದ್ದಾರೆ.


    Provided by
    Provided by

    ರಾಕೇಶ್ ಶೆಟ್ಟಿ ಪತ್ರಿಕೋದ್ಯಮವನ್ನು ಕೇವಲ ತನ್ನ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಂಡು ಅನೇಕ ಕಾನೂನು ಬಾಹಿರ, ಬ್ಲಾಕ್ ಮೇಲ್, ವಸೂಲಿ ಧಂಧೆಗೆ ಬಳಸಿಕೊಂಡ ರಾಕೇಶ್ ಶೆಟ್ಟಿಯ ಮೇಲೆ ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈತನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು ನಾಗರಿಕ ಸಮಾಜದ ಪರವಾಗಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಕೇಶ್ ಶೆಟ್ಟಿ ಅವರ ಹಿಂದಿನ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಇಡೀ ಜಾತಕವನ್ನು ತೆರೆದಿಟ್ಟಿದ್ದಾರೆ.

    ರಾಕೇಶ್ ಶೆಟ್ಟಿ ಹಿನ್ನಲೆ :

    * ಮುಂಬೈ ಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡುವ ಜಾಲದಲ್ಲಿ ತೊಡಗಿದ್ದ ಈತ, ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿ ಆಕೆಯ ಸಂಬಂಧಿಕರು ಈತನನ್ನು ಮುಂಬೈನಿಂದ ಓಡಿಸಿದ್ದಾರೆ.

    * ಬೆಂಗಳೂರಿನ ರವಿ ಉಪ್ಪಾಳವರು ಮುಖ್ಯಸ್ಥ ಆಗಿದ್ದ WORK FORCE ನ ನಿರ್ದೇಶಕನಾದ ಇವನನ್ನು ಈತನ ಅಸಲಿ ಮುಖ ಗೊತ್ತಾದ ಮೇಲೆ ಹೊರ ಹಾಕಿದ್ದಾರೆ.

    * ACS-FIN consultancy ಬಸವನಗುಡಿಯಲ್ಲಿ ತನ್ನದೇ ಮಹಿಳಾ ಸಿಬ್ಬಂದಿಯಿಂದ ಲೈಂಗಿಕ ಶೋಷಣೆ ಮಾಡಿದ ಕಾರಣಕ್ಕೆ ಏಟು ತಿಂದಿದ್ದ.

    * ವಾಸ್ತವದಲ್ಲಿ ಈ ರಾಕೇಶ್ ಶೆಟ್ಟಿ ಮುಂಬೈನ ಹೆಸರಾಂತ CA ರಮೇಶ್ ಸಂಜೀವ ಶೆಟ್ಟಿ ಎನ್ನುವವರ CA ಸರ್ಟಿಫಿಕೇಟ್ ಅನ್ನು forge ಮಾಡಿ ರಾಕೇಶ್ ಸಂಜೀವ ಶೆಟ್ಟಿ ಎಂದು ಬದಲಾಯಿಸಿ ಬೆಂಗಳೂರಿನ ಉದ್ಯಮಿಗಳಿಗೆ ತಾನು ಮೇಧಾವಿ CA ಎಂದು ಹೇಳಿ ನಾಮ ಹಾಕುತ್ತಿದ್ದ. ಈ ವಿಷಯ ಗೊತ್ತಾಗಿ ಇತರ ಸಿಬ್ಬಂದಿ ಇವನನ್ನು ದೂರ ಇಟ್ಟಿದ್ದರು.

    * 2018 ರಲ್ಲಿ ಬೆಂಗಳೂರಿನ POWER SMART MEDIA ದಲ್ಲಿ ತಾನು ಅಕೌಂಟ್ ಉದ್ಯೋಗಿ ಎಂದು ಸೇರಿಕೊಂಡು ಅದರ ನಿರ್ದೇಶಕರಿಗೆ ಮೋಸ ಮಾಡಿ ಕಂಪನಿ ಹಕ್ಕನ್ನು ಮುಂಬೈ ಮೂಲದ MITCON INFRA PROJECT PVT LTD ಎಂಬ ಕೇವಲ 10/10 ft ಕೋಣೆ ಇರುವ Shell ಕಂಪನಿಗೆ ವರ್ಗಾಯಿಸಿ ತಾನೇ POWER TV MD ಎಂದು ಘೋಷಿಸಿಕೊಳ್ಳುತ್ತಾನೆ. ಅಂದಿನಿಂದ ಇಲ್ಲಿಯವರೆಗೆ ಅನೇಕ ಉದ್ಯಮಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ಮತ್ತು ತನ್ನ ವಾಹಿನಿಯ ವರದಿಗಾರರು ಮತ್ತು ಸಿಬ್ಬಂದಿಗಳಿಗೆ ನಾನಾ ರೀತಿಯಲ್ಲಿ ವಂಚಿಸಿರುವುದು ಪತ್ತೆ ಆಗಿದೆ.

    * ಕರ್ನಾಟಕ ಪೊಲೀಸ್ ಇಲಾಖೆಯ ದಕ್ಷ ಹಿರಿಯ IPS ಅಧಿಕಾರಿ ಶ್ರೀ ರವಿಕಾಂತೆ ಗೌಡ, ಡಾ A ರಮ್ಯಾ ರಮೇಶ್ ಗೌಡ, ಶ್ರೀ HM ರಮೇಶ್ ಗೌಡ Ex MLC ಅವರು ಈತನು ಅವರಿಂದ ಹಣ ವಸೂಲಿ ಉದ್ದೇಶದಿಂದ ಸುಳ್ಳು ಅಪಪ್ರಚಾರ ಸುದ್ದಿ ಪ್ರಸಾರ ಮಾಡಿದ ಕಾರಣ ರಾಕೇಶ್ ಶೆಟ್ಟಿ ಮತ್ತು ವಾಹಿನಿಯ ವಿರುದ್ಧ ಮೊಕದ್ದಮೆ ದಾಖಲು ಮಾಡಿದಾಗ ವಿಚಾರಣೆ ಸಂದರ್ಭದಲ್ಲಿ ಪ್ರಸಾರದ ಪರವಾನಿಗೆ 2021 ರವರೆಗೆ MITCON INFRA ಸಂಸ್ಥೆ ಹೆಸರಿಗೆ ಇದ್ದು 2021ರ ನಂತರ ನವಿಕೃತ ಆಗಿಲ್ಲದಿರುವುದು ಕಂಡುಬಂದಿದೆ.

    * POWER SMART & MITCON INFRA 2 ಭಿನ್ನ ಸಂಸ್ಥೆ ಆಗಿದ್ದು ಪ್ರಸಾರದ ಪರವಾನಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ( MIB ) ಮತ್ತು ಕೇಂದ್ರ ಗೃಹ ಸಚಿವಾಲಯದ ನಿಯಮಗಳಿಗೆ ವಿರುದ್ಧ ಆಗಿರುವುದು ಕಂಡು ಬಂದಿದೆ.

    * ಪ್ರಸಾರದ ಪರವಾನಿಗೆ ಪಡೆಯುವಾಗ ಮುಖ್ಯಸ್ಥರಾದವರು Security clearance ಪಡೆಯುವುದು ಕಡ್ಡಾಯ ಇರುತ್ತದೆ. ಹೀಗಾಗಿ ರಾಕೇಶ್ ಶೆಟ್ಟಿ ಯ power tv ಚಾನೆಲ್ ನಡೆಸುವುದು ದೇಶದ ಭದ್ರತೆಗೆ ಮಾರಕವಾಗಿರುವುದು ವಿಚಾರಣೆ ಸಂದರ್ಭದಲ್ಲಿ ಕಂಡು ಬಂದಿರುತ್ತದೆ.

    * ಇದುವರೆಗೆ ರಾಕೇಶ್ ಶೆಟ್ಟಿಯ ಮೇಲೆ 21 ಕ್ರಿಮಿನಲ್ ಪ್ರಕರಣ, 16 ಕೋರ್ಟ್ ಕಂಟೆಪ್ಟ್ , 5 ಪ್ರಕರಣಗಳಲ್ಲಿ ಶಿಕ್ಷೆ, ಒಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ಘೋಷಿಸಿದ ಅಪರಾಧಿ ಇರುವುದು ದಾಖಲೆಯಿಂದ ಕಂಡು ಬರುತ್ತದೆ.

    * ಸುಳ್ಳು ಸುದ್ದಿ ಪ್ರಸಾರ ಮಾಡಲು, ವ್ಯಕ್ತಿಗಳ ತೇಜೋವಧೆ ಮಾಡುವುದಕ್ಕಾಗಿ ಹಣ ಪಡೆಯುವುದು, ತನ್ನ ಮೇಲೆ ಮೊಕದ್ದಮೆ ಹೂಡುವವರ ಮೊಬೈಲ್ Hack ಮಾಡಿ ಬ್ಲಾಕ್. ಮೇಲ್ ಮಾಡುವುದು ಈತನ ಅಭ್ಯಾಸ

    * ಜತೆಗೆ ವಾಹಿನಿಯಲ್ಲಿ ಅವಾಚ್ಯವಾಗಿ, ವಿಚಿತ್ರವಾಗಿ ಅಸಹ್ಯವಾಗಿ ನಿಂದಿಸುವುದು, ಸ್ಟಿಂಗ್ ಆಪರೇಶನ್ ಎಂಬ ಹೆಸರಲ್ಲಿ Sex Tape ತಯಾರಿಸುವುದು ಈತನ ಕಾರ್ಯಶೈಲಿ ಆಗಿದ್ದು ಪತ್ರಿಕೋದ್ಯಮದ ನೈತಿಕತೆಗೆ ವಿರುದ್ಧವಾಗಿದೆ.

    ಇಷ್ಟೊಂದು ಕ್ರಿಮಿನಲ್ ಹಿನ್ನಲೆ ಇರುವ ಈತನ ವಿರುದ್ಧ ಇನ್ನೂ ಯಾಕೆ ರೌಡಿ ಶೀಟರ್ ಯಾಕೆ ಇನ್ನೂ ಮಾಡಿಲ್ಲ ಪೊಲೀಸ್ ಇಲಾಖೆ? ಆದಷ್ಟು ಬೇಗ ಪೊಲೀಸ್ ಇಲಾಖೆ ರಾಕೇಶ್ ಶೆಟ್ಟಿ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ ರೌಡಿ ಶೀಟರ್ ದಾಖಲಿಸಿ ಬಂಧಿಸಬೇಕು ಅಂತ ಮಟ್ಟಣ್ಣ ಆಗ್ರಹಿಸಿದ್ದಾರೆ.

    ಕೇಂದ್ರ ಸರ್ಕಾರದ ED ಮತ್ತು CBI ಸಂಸ್ಥೆಗಳು ಈತನ ಬೇನಾಮಿ ವ್ಯವಹಾರ, ಬೇನಾಮಿ ಆಸ್ತಿ, ಅನೈತಿಕ ಚಟುವಟಿಕೆ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಸಂಸದರು ಮತ್ತು ಕೇಂದ್ರ ಸಚಿವರು ಈ ಕುರಿತು ಗಮನ ಹರಿಸಬೇಕು. ಕರ್ನಾಟಕ ಪತ್ರಿಕೋದ್ಯಮದಿಂದ ರಾಕೇಶ್ ಶೆಟ್ಟಿ ಯನ್ನು ಹೊರಗಿಡಬೇಕು. ಏಕೆಂದರೆ ಈತ ಈತ ಪತ್ರಕರ್ತ ಅಥವಾ ಪತ್ರಿಕೋದ್ಯಮಿಯಾಗಿರದೆ ಪತ್ರಿಕೋದ್ಯಮ ಹೆಸರಲ್ಲಿ ವಂಚನೆ ಸುಲಿಗೆ ಮಾಡುವ ಮಹಾ ವಂಚಕ ಎಂದು ದಾಖಲೆ ಇಂದ ಸಾಬೀತಾಗಿದೆ ಎಂದರು.

    ರಾಕೇಶ್ ಶೆಟ್ಟಿ ಎಂಬ ವ್ಯಕ್ತಿ ನಾಗರೀಕ ಸಮಾಜಕ್ಕೆ ಮಾರಕವಾಗಿದ್ದು ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ವ್ಯಕ್ತಿ ಈತನ ಸಹಾಯಕ್ಕೆ ಬಾರದೇ ಈತನ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಇಚ್ಛಾ ಶಕ್ತಿ ತೋರಿಸಬೇಕು ಎಂದು ಗಿರೀಶ್ ಮಟ್ಟನ್ನನವರ್ ಆಗ್ರಹಿಸಿದ್ದಾರೆ.

    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಕರ್ನಾಟಕ ರಣಧೀರರ ವೇದಿಕೆ: ಅದ್ಧೂರಿ ಕನ್ನಡ ರಾಜ್ಯೋತ್ಸವ, ತಾಯಿ ಭುವನೇಶ್ವರಿ ಹಬ್ಬ

    November 25, 2025

    ಮೆಕ್ಕೆಜೋಳ, ಹೆಸರುಕಾಳು ಬೆಳೆಗಾರರ ನೆರವಿಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    November 22, 2025

    ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್

    November 16, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ | ಡಿ.1, 2ಕ್ಕೆ ಶ್ರೀ ಹನುಮ ಜಯಂತಿ ಆಚರಣೆ

    November 25, 2025

    ಕೊರಟಗೆರೆ: ತಾಲ್ಲೂಕಿನ ದಾಸಾಲುಕುಂಟೆ ಸಮೀಪದ ಬೆಟ್ಟದ ಶಂಭೋನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಿ.1, 2 ರಂದು ಶ್ರೀ ಹನುಮ ಜಯಂತಿ…

    ಸ್ಕೌಟ್ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಶಾ ಪ್ರಸನ್ನ ಕುಮಾರ್ ಆಯ್ಕೆ

    November 25, 2025

    ಕರ್ನಾಟಕ ರಣಧೀರರ ವೇದಿಕೆ: ಅದ್ಧೂರಿ ಕನ್ನಡ ರಾಜ್ಯೋತ್ಸವ, ತಾಯಿ ಭುವನೇಶ್ವರಿ ಹಬ್ಬ

    November 25, 2025

    ಸಹಾಯಧನ ಸೌಲಭ್ಯಕ್ಕಾಗಿ ಮೀನುಗಾರರಿಂದ ಅರ್ಜಿ ಆಹ್ವಾನ

    November 25, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.