ರಾಜಸ್ಥಾನ: ಗೆಸ್ಟ್ ಹೌಸ್ ನಲ್ಲಿ ತಂಗಿದ್ದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಮೆಹಂದಿಪುರದ ಬಾಲಾಜಿ ಪಟ್ಟಣದ ಧರ್ಮಶಾಲಾ ಅತಿಥಿಗೃಹದಲ್ಲಿ ನಡೆದಿದೆ.
ಮೃತರೆಲ್ಲರೂ ಉತ್ತರಾಖಂಡದ ಡೆಹ್ರಾಡೂನ್ ನ ರಾಯ್ ಪುರ ಪ್ರದೇಶದವರು ಎಂದು ಹೇಳಲಾಗಿದೆ. ಪೋಷಕರು ಹಾಗೂ ಮಗ, ಮಗಳು ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ.
ಜನವರಿ 12ರಂದು ಸಮಾಧಿ ವಾಲಿ ಗಲಿಯ ರಾಧಾ—ಕೃಷ್ಣ ಆಶ್ರಮದ ಧರ್ಮಶಾಲಾ ಕೊಠಡಿಯಲ್ಲಿ ಈ ಕುಟುಂಬ ಬಾಡಿಗೆ ಪಡೆದಿತ್ತು. ಜನವರಿ 14ರಂದು ಚೆಕ್ ಔಟ್ ಮಾಡಲು ಈ ಕುಟುಂಬ ನಿರ್ಧರಿಸಿತ್ತು. ಆದರೆ ಮ್ಯಾನೇಜರ್ ಪರಿಶೀಲಿಸಲು ಕೊಠಡಿಯೊಳಗೆ ತೆರಳಿದ ವೇಳೆ ನಾಲ್ಕು ಮೃತದೇಹಗಳು ಬಿದ್ದಿರುವುದು ಕಂಡು ಬಂದಿದ್ದು, ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಲಾಜಿ ಪೊಲೀಸರು ಹಾಗೂ ತೋಡಭೀಮ್ ಠಾಣೆ ಪ್ರಭಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ವಿಷ ಸೇವಿಸಿ ಸಾವನ್ನಪ್ಪಿರುವ ಶಂಕೆ ಮೂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx