ಬಿಬಿಎಂಪಿಯಲ್ಲಿ ಮಾರ್ಷಲ್ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕರಿಂದ ಹಣ ಪಡೆದು ನಕಲಿ ಪ್ರಮಾಣ ಪತ್ರ ನೀಡಿ ವಂಚಿಸಿದ್ದ ಆರೋಪಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ. ನಗರ ನಿವಾಸಿ ಹರ್ಷ(23) ಬಂಧಿತ ಆರೋಪಿಯಿಂದ ಬಿಬಿಎಂಪಿ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ನಕಲಿ ನೇಮಕಾತಿ ಪತ್ರಗಳು, ಫೋನ್ ಪೇ ಮಾಡಿ ಹಣ ಪಡೆದಿರುವ ಬಗ್ಗೆ ಮೊಬೈಲ್ ಸ್ಕ್ರೀನ್ ಶಾಟ್ ಪ್ರತಿಗಳನ್ನು ಜಪ್ತಿ ಮಾಡಲಾಗಿದೆ.


