ಚಿಕ್ಕನಾಯಕನಹಳ್ಳಿ: ಹನುಮಂತ ರಾಮ ನಾಯಕ್ ಗ್ರಾಮೀಣಾಭಿವೃದ್ಧಿ ಸಂಘ ಚಿಕ್ಕನಾಯಕನ ಹಳ್ಳಿ ಹಾಗೂ ತಾಲ್ಲೂಕು ಬಂಜಾರ ಬಳಗ ವತಿಯಿಂದ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ಸಪ್ತಗಿರಿ ಆಸ್ಪತ್ರೆ, ಬೆಂಗಳೂರು ಇವರ ಸಹಯೋಗದೊಂದಿಗೆ ಚಿಕ್ಕಸಂದ್ರ, ಹೆಸರುಘಟ್ಟ ಮುಖ್ಯರಸ್ತೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಔಷಧಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಆಗಸ್ಟ್ 24 ಹಾಗೂ 25ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಧ್ಯಾನ ನಗರಿ ಸೇವಾಲಾಲ್ ಸದನ, ಕೋಡಿ ಪಾಳ್ಯ, ಹುಳಿಯಾರ ಇಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಗ್ರಾ.ಪಂ. ಸದಸ್ಯ, ಸಮಾಜ ಸೇವಕ ಹನುಮಂತ ರಾಮ ನಾಯಕ್ ಚಿಕ್ಕನಾಯಕನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


