nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಕಾಶ್ ರಾಜ್ ರಾಯಭಾರಿ, ಮಹಿಳಾ ಸಬಲೀಕರಣವೇ ಈ ಬಾರಿಯ ‘ಥೀಮ್’

    December 23, 2025

    ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ನನ್ನ‌ ಪೂರ್ಣ ಸಹಮತವಿದೆ: ಸಿಎಂ ಸಿದ್ದರಾಮಯ್ಯ

    December 23, 2025

    ಹಾವೇರಿ: 7ಕ್ಕೂ ಹೆಚ್ಚು ಮನೆಗಳಲ್ಲಿ ಸರಣಿ ಕಳ್ಳತನ, ಚಹಾ ಕುಡಿದು ಹೋದ ಕಳ್ಳರು!

    December 23, 2025
    Facebook Twitter Instagram
    ಟ್ರೆಂಡಿಂಗ್
    • ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಕಾಶ್ ರಾಜ್ ರಾಯಭಾರಿ, ಮಹಿಳಾ ಸಬಲೀಕರಣವೇ ಈ ಬಾರಿಯ ‘ಥೀಮ್’
    • ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ನನ್ನ‌ ಪೂರ್ಣ ಸಹಮತವಿದೆ: ಸಿಎಂ ಸಿದ್ದರಾಮಯ್ಯ
    • ಹಾವೇರಿ: 7ಕ್ಕೂ ಹೆಚ್ಚು ಮನೆಗಳಲ್ಲಿ ಸರಣಿ ಕಳ್ಳತನ, ಚಹಾ ಕುಡಿದು ಹೋದ ಕಳ್ಳರು!
    • ಕೊರಟಗೆರೆ:  ಜಿ.ಎಂ.ಕಾಮರಾಜ್ ಪಶ್ಚಿಮ ರೈಲ್ವೆ ಬೋರ್ಡ್ ನಿರ್ದೇಶಕರಾಗಿ ಆಯ್ಕೆ
    • ಭ್ರಷ್ಟಾಚಾರ ಆರೋಪ: ಶ್ರವಣೂರು ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ತಮಟೆ ಚಳವಳಿ
    • ಚಿರತೆ ದಾಳಿಯಿಂದಾಗಿ ಮಹಿಳೆ ಸಾವು: ದಾಳಿ ನಡೆದ 24 ಗಂಟೆ ಒಳಗೆ  ಚಿರತೆ ಸೆರೆ
    • ತಿಪಟೂರು: ಡಿಸೆಂಬರ್ 24ರಂದು ‘ಸಾಂಸ್ಕೃತಿಕ ವೈಭವ’ ಬೃಹತ್ ಕಾರ್ಯಕ್ರಮ
    • ಪಾವಗಡ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 2025ರ ಮಾರ್ಚ್ 1 ರಂದು ಗಾಂಧಿ ರೈತ ವಿಜ್ಞಾನ ಕೇಂದ್ರ–ಜೈವಿಕ ಸಂಪನ್ಮೂಲ ಕೇಂದ್ರ ಉದ್ಘಾಟನೆ
    ತುಮಕೂರು February 27, 2025

    2025ರ ಮಾರ್ಚ್ 1 ರಂದು ಗಾಂಧಿ ರೈತ ವಿಜ್ಞಾನ ಕೇಂದ್ರ–ಜೈವಿಕ ಸಂಪನ್ಮೂಲ ಕೇಂದ್ರ ಉದ್ಘಾಟನೆ

    By adminFebruary 27, 2025No Comments2 Mins Read
    jaivika kendra

    ತುಮಕೂರು: ಜನರಿಗೆ ವಿಷಮುಕ್ತ ಆಹಾರ ದೊರಯಬೇಕು. ಭೂಮಿಯ ಮೇಲಿನ ಜೀವ ವೈವಿದ್ಯತೆಯನ್ನುಕಾಪಾಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ದೊಡ್ಡ ಹೊಸೂರಿನ ಗಾಂಧೀ ಸಹಜ ಬೇಸಾಯ ಆಶ್ರಯದಲ್ಲಿ 2025ರ ಮಾರ್ಚ್ 01ರ ಶನಿವಾರ ಬೆಳಗ್ಗೆ 10 ಗಂಟೆಗೆ ಗಾಂಧಿ ರೈತ ವಿಜ್ಞಾನ ಕೇಂದ್ರ–ಜೈವಿಕ ಸಂಪನ್ಮೂಲಕ ಕೇಂದ್ರವನ್ನುಆರಂಭಿಸಲಾಗುತ್ತಿದೆ.

    ಸಾವಯವ ಕೃಷಿಗೆ ಬೇಕಾದ ಒಳಸುರಿಗಳಾದ ಪಂಚಗವ್ಯ, ಕುನಪಜಲ ಮತ್ತುಇನ್ನಿತರ ಪದಾರ್ಥಗಳನ್ನು ಹೊಂದಿಸಲು ಹಾಗು ಉತ್ಪಾದಿಸಲು ರೈತರಿಗೆ ಕಷ್ಟವಾಗುತ್ತಿದೆ. ಉದಾಹರಣೆಗೆ ಹೇಳುವುದಾದರೆ, ನೀಲಗಿರಿಎಲೆಯ ಸಾರವು ಬಿಳಿ ನೊಣಗಳು ಮತ್ತು ಕಪ್ಪುಹೇನುಗಳಂತಹ ಕ್ರಿಮಿಗಳನ್ನು ಹತೋಟಿಗೊಳಿಸುತ್ತದೆ, ಅಂದರೆ ಮೊಟ್ಟೆ ಇಡುವ ಕ್ರಿಯೆ ತಡೆಯುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ತಿಳಿದುಬಂದಿದೆ.


    Provided by
    Provided by

    ಈ ವಿಜ್ಞಾನವನ್ನು ತಿಳಿದ ರೈತರು ನೀಲಿಗಿರಿ ಮರದ ಬಳಿ ಹೋಗಿ, ನಿರ್ದಿಷ್ಟವಾಗಿ ಯಾವ ಎಲೆಯನ್ನು ತರಬೇಕು; ಎಳೆಯ ಚಿಗುರೋ, ಅಥವಾ ಚೆನ್ನಾಗಿ ಬಲಿತದ್ದೋ, ಒಣಗಿದ್ದೊ ಎಂದು ಗೊಂದಲಕ್ಕೆ ಸಿಲುಕುತ್ತಾನೆ. ಅಷ್ಟಲ್ಲದೇ, ಎಲೆಗಳನ್ನು ಗಂಜಲದಲ್ಲಿಎಷ್ಟು ದಿನ ಇಡಬೇಕು.? ಗಾಳಿಯಾಡಿಸಬೇಕೋ ಬೇಡವೋ.? ಗಾಳಿಯಾಡಿಸುವುದಾದರೆ ಎಷ್ಟು ಹೊತ್ತು.? ಮಿಶ್ರಣಕ್ಕೆ ಹುಳ ಬಿದ್ದರೆ ಏನು ಮಾಡಬೇಕು.? ಮಿಶ್ರಣವನ್ನುತಿರುಗಿಸಬೇಕೋ ಬೇಡವೋ.?ಇಂತಹಕಠಿಣ ಸಮಸ್ಯೆಗಳನ್ನು ರೈತರು ಅರ್ಥೈಸಲುಕಷ್ಟವಾಗುತ್ತಿದೆ..

    ಇನ್ನೊಂದು ಉದಾಹರಣೆ ನೋಡುವುದಾದರೆ, ಪಂಚಗವ್ಯದ ಶಕ್ತಿ, ಸಾಮರ್ಥ್ಯ ಹಾಗೂ ಆಯಸ್ಸು ಪರಿಣಾಮಕಾರಿಯಾಗಿರ ಬೇಕಾದರೆ, ಅದಕ್ಕೆ ಗಾಳಿಯನ್ನು ಎಷ್ಟು ಸಮಯದ ವರೆಗೆ ಆಡಿಸಬೇಕು ಮತ್ತು ನಿಲ್ಲಿಸಬೇಕು ಎಂಬುದರ ಮೇಲೆ ನಿಂತಿರುತ್ತದೆಯೋ ಹೊರತು, ಸುಮ್ಮನೆ 21 ದಿನಗಳವರೆಗೆ, ದಿನಕ್ಕೆ 3 ಬಾರಿ ದ್ರಾವಣವನ್ನು ತಿರುಗಿಸುವುದರಿಂದಲ್ಲ.

    ಇಂತಹ ಸಮಸ್ಯೆಗಳನ್ನು ಉತ್ತರಿಸಲು, ಗಾಂಧೀಜಿ ಸಹಜ ಬೇಸಾಯಾಶ್ರಮಲ್ಲಿ “ಗಾಂಧಿರೈತ ವಿಜ್ಞಾನಕೇಂದ್ರ — ಜೈವಿಕ ಸಂಪನ್ಮೂಲ ಕೇಂದ್ರ” ವನ್ನುತೆರೆದು, ಅದನ್ನುಒಂದಷ್ಟು ರೈತರ ಗುಂಪು ನಡೆಸಿದರೆ ಹೇಗೆ ಎಂದು ಆಲೋಚಿಸಿ, ಒಂದು ಸಣ್ಣ ಪ್ರಯೋಗಾಲಯವನ್ನು ಸ್ಥಾಪಿಸುತ್ತಿದ್ದೇವೆ.

    ಈ ಕೇಂದ್ರದಲ್ಲಿ 12 ವಿಭಿನ್ನವಾದ ಉತ್ಪನ್ನಗಳನ್ನು ಉತ್ತಮವಾಗಿ ಉತ್ಪಾದಿಸುವುದರ ಬಗ್ಗೆ ಗಮನವಿರಿಸಲಾಗುತ್ತದೆ. ಅದರಲ್ಲಿ ಕೆಲವು ಆಮ್ಲಜನಕ ಸಹಿತ ಮತ್ತೆ ಕೆಲವು ಆಮ್ಲಜನಕ ರಹಿತ ವಾಗಿರುತ್ತವೆ. ಪಂಚಗವ್ಯ, ಹುಳಿ ಮಜ್ಜಿಗೆ, ಕಂಬುಚ, ಹುಳಗಳು ಹಾಗೂ ಮೊಟ್ಟೆಗಳು ಸೇರಿದಂತೆ ಕೀಟ ನಿಯಂತ್ರಣಕ್ಕಾಗಿ ವಿವಿಧ ಸಸ್ಯಸಾರಗಳು ಮತ್ತುಇನ್ನಿತರ ಕೀಟಗಳ ನಿಯಂತ್ರಣಕ್ಕಾಗಿ ಇದ್ದಿಲು–ಸುಣ್ಣ ಬೆರೆಸಿದ ಧೂಳು, ಮೀನು ಮತ್ತು ಮೊಟ್ಟೆಯ ಅಮೈನೋ ಆಮ್ಲಗಳು, ಬಿಡಿ–500, ಬೋರಾನ್, ಪೊಟಾಷ್ ಮುಂತಾದ ಉತ್ಪನ್ನಗಳನ್ನು ಒಳಗೊಂಡಿದೆ.

    ಈ ಉತ್ಪನ್ನಗಳು ಮಣ್ಣಿನರಸಸಾರ(pH) ನಿಯಂತ್ರಣ, ವಿದ್ಯುತ್ ವಾಹಕತೆ (EC) ಹೆಚ್ಚಿಸಿ, ಧನಾತ್ಮಕ ಆವೇಶಗಳ ವಿನಿಮಯ ಸಾಮರ್ಥ್ಯ (CEC) ವನ್ನು ವೃಧ್ದಿಸಿ ಸಸ್ಯಗಳ ಒಟ್ಟಾರೆ ಬೆಳವಣಿಗೆಗೆ ಸಹಾಯವಾಗುತ್ತವೆ. GRV ಏಜೈವಿಕ ಸಂಪನ್ಮೂಲ ಕೇಂದ್ರವು, ಸರಾಸರಿಒಂದು ಹೆಕ್ಟೇರ್ ಭೂಮಿ ಹೊಂದಿರುವ 1400 ರೈತರಿಗೆ ಸೇವೆ ಸಲ್ಲಿಸುವಗುರಿಯನ್ನು ಹೊಂದಿದೆ. ಮೊದಲ ಹಂತದಲ್ಲಿ, ಯೋಜನೆಯ ಸಾಮರ್ಥ್ಯವನ್ನುಕ್ರಿಯಾತ್ಮಕವಾಗಿ ಮೌಲ್ಯಮಾಪನ ಮಾಡಲು 100 ರೈತರನ್ನು ನೋಂದಾಯಿಸಿಕೊಳ್ಳಲಾಗಿದೆ.

    ಕರ್ನಾಟಕ ರಾಜ್ಯದಲ್ಲೇ ನಮ್ಮದು ಮೊದಲ ಪ್ರಯೋಗ: ಕರ್ನಾಟಕ ರಾಜ್ಯದಲ್ಲಿಆಗುತ್ತಿರುವ ಹವಾಮಾನ ಬದಲಾವಣೆಗೆ ಅನುಗುಣವಾದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು, ಈ ನಮ್ಮ ಕೇಂದ್ರವು ಮಹತ್ವದ ಕೊಡುಗೆಯನ್ನು ನೀಡುತ್ತದೆ ಎಂದು ಭಾವಿಸಿ, ರಾಜ್ಯದಲ್ಲಿ ಮೊದಲ ಪ್ರಯೋಗಗಾಂಧಿ ಸಹಜ ಬೇಸಾಯ ಆಶ್ರಮದಾಗಿದೆ.

    2025ರ ಮಾರ್ಚ್ 01ರ ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಯುವ “ಗಾಂಧಿರೈತ ವಿಜ್ಞಾನಕೇಂದ್ರ ಹಾಗೂ ಗಾಂಧಿಜೈವಿಕ ಸಂಪನ್ಮೂಲ ಕೇಂದ್ರ”ದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಸಿದ್ದಗಂಗಾ ಮಠದ ಶ್ರೀಶ್ರೀಸಿದ್ದಲಿಂಗ ಮಹಾಸ್ವಾಮೀಜಿಗಳು, ತಿಪಟೂರಿನ ಗುರುಕುಲಾನಂದ ಆಶ್ರಮದ ಸದ್ಗುರು ಶ್ರೀ ಇಮ್ಮಡಿಕರಿ ಬಸವದೇಶಿ ಕೇಂದ್ರ ಮಹಾಸ್ವಾಮೀಜಿಗಳು, ಕೆವಿಕೆ ಹಿರೇಹಳ್ಳಿಯ ಡಾ.ಎನ್.ಲೋಗಾನಂದನ್, ಜೆಡಿಯುರಾಜ್ಯಾಧ್ಯಕ್ಷರಾದ ಮಹಿಮ ಜೆ.ಪಟೇಲ್, ರಾಷ್ಟ್ರೀಯ ಸ್ವಾಭಿಮಾನಿ ಅಂದೋಲನದ ಬಸವರಾಜ ಪಟೇಲ್ ವೀರಾಪುರ, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕೃಷಿ ಆರ್ಥಿಕ ತಜ್ಞರಾದ ತೇಜಸ್ವಿನಿ ಪಟೇಲ್, ಕರ್ನಾಟಕ ಸರಕಾರದ ಕೃಷಿ ಇಲಾಖೆ ಆಯುಕ್ತರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಡಿಸೆಂಬರ್ 31ರಂದು ಸಿರಿಧಾನ್ಯ ಪಾಕ ಸ್ಪರ್ಧೆಗೆ ಅರ್ಜಿ: ವಿಜೇತರಿಗೆ ನಗದು ಬಹುಮಾನ | ಯಾರೆಲ್ಲ ಭಾಗವಹಿಸಬಹುದು?

    December 22, 2025

    ಸಿದ್ದಗಂಗಾ ಶ್ರೀಗಳ ಮಿಂಚಿನ ಸಂಚಾರ ಸ್ಫೂರ್ತಿದಾಯಕ : ಸಸ್ಯಾಂದೋಲನ ನಡೆಸಲು ಎಂ.ಶಿವಕುಮಾರ್ ಮನವಿ

    December 22, 2025

    ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಭಕ್ತರು ಶ್ರೀಮಠದ ಆಸ್ತಿ : ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ

    December 22, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಕಾಶ್ ರಾಜ್ ರಾಯಭಾರಿ, ಮಹಿಳಾ ಸಬಲೀಕರಣವೇ ಈ ಬಾರಿಯ ‘ಥೀಮ್’

    December 23, 2025

    ಬೆಂಗಳೂರು: ಪ್ರತಿಷ್ಠಿತ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು (BIFFes) ಇದೇ ಜನವರಿ 29ರಿಂದ ಫೆಬ್ರವರಿ 6, 2026ರ ವರೆಗೆ ನಡೆಯಲಿದ್ದು,…

    ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ನನ್ನ‌ ಪೂರ್ಣ ಸಹಮತವಿದೆ: ಸಿಎಂ ಸಿದ್ದರಾಮಯ್ಯ

    December 23, 2025

    ಹಾವೇರಿ: 7ಕ್ಕೂ ಹೆಚ್ಚು ಮನೆಗಳಲ್ಲಿ ಸರಣಿ ಕಳ್ಳತನ, ಚಹಾ ಕುಡಿದು ಹೋದ ಕಳ್ಳರು!

    December 23, 2025

    ಕೊರಟಗೆರೆ:  ಜಿ.ಎಂ.ಕಾಮರಾಜ್ ಪಶ್ಚಿಮ ರೈಲ್ವೆ ಬೋರ್ಡ್ ನಿರ್ದೇಶಕರಾಗಿ ಆಯ್ಕೆ

    December 23, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.