ತುಮಕೂರು: ಜನರಿಗೆ ವಿಷಮುಕ್ತ ಆಹಾರ ದೊರಯಬೇಕು. ಭೂಮಿಯ ಮೇಲಿನ ಜೀವ ವೈವಿದ್ಯತೆಯನ್ನುಕಾಪಾಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ದೊಡ್ಡ ಹೊಸೂರಿನ ಗಾಂಧೀ ಸಹಜ ಬೇಸಾಯ ಆಶ್ರಯದಲ್ಲಿ 2025ರ ಮಾರ್ಚ್ 01ರ ಶನಿವಾರ ಬೆಳಗ್ಗೆ 10 ಗಂಟೆಗೆ ಗಾಂಧಿ ರೈತ ವಿಜ್ಞಾನ ಕೇಂದ್ರ–ಜೈವಿಕ ಸಂಪನ್ಮೂಲಕ ಕೇಂದ್ರವನ್ನುಆರಂಭಿಸಲಾಗುತ್ತಿದೆ.
ಸಾವಯವ ಕೃಷಿಗೆ ಬೇಕಾದ ಒಳಸುರಿಗಳಾದ ಪಂಚಗವ್ಯ, ಕುನಪಜಲ ಮತ್ತುಇನ್ನಿತರ ಪದಾರ್ಥಗಳನ್ನು ಹೊಂದಿಸಲು ಹಾಗು ಉತ್ಪಾದಿಸಲು ರೈತರಿಗೆ ಕಷ್ಟವಾಗುತ್ತಿದೆ. ಉದಾಹರಣೆಗೆ ಹೇಳುವುದಾದರೆ, ನೀಲಗಿರಿಎಲೆಯ ಸಾರವು ಬಿಳಿ ನೊಣಗಳು ಮತ್ತು ಕಪ್ಪುಹೇನುಗಳಂತಹ ಕ್ರಿಮಿಗಳನ್ನು ಹತೋಟಿಗೊಳಿಸುತ್ತದೆ, ಅಂದರೆ ಮೊಟ್ಟೆ ಇಡುವ ಕ್ರಿಯೆ ತಡೆಯುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ತಿಳಿದುಬಂದಿದೆ.
ಈ ವಿಜ್ಞಾನವನ್ನು ತಿಳಿದ ರೈತರು ನೀಲಿಗಿರಿ ಮರದ ಬಳಿ ಹೋಗಿ, ನಿರ್ದಿಷ್ಟವಾಗಿ ಯಾವ ಎಲೆಯನ್ನು ತರಬೇಕು; ಎಳೆಯ ಚಿಗುರೋ, ಅಥವಾ ಚೆನ್ನಾಗಿ ಬಲಿತದ್ದೋ, ಒಣಗಿದ್ದೊ ಎಂದು ಗೊಂದಲಕ್ಕೆ ಸಿಲುಕುತ್ತಾನೆ. ಅಷ್ಟಲ್ಲದೇ, ಎಲೆಗಳನ್ನು ಗಂಜಲದಲ್ಲಿಎಷ್ಟು ದಿನ ಇಡಬೇಕು.? ಗಾಳಿಯಾಡಿಸಬೇಕೋ ಬೇಡವೋ.? ಗಾಳಿಯಾಡಿಸುವುದಾದರೆ ಎಷ್ಟು ಹೊತ್ತು.? ಮಿಶ್ರಣಕ್ಕೆ ಹುಳ ಬಿದ್ದರೆ ಏನು ಮಾಡಬೇಕು.? ಮಿಶ್ರಣವನ್ನುತಿರುಗಿಸಬೇಕೋ ಬೇಡವೋ.?ಇಂತಹಕಠಿಣ ಸಮಸ್ಯೆಗಳನ್ನು ರೈತರು ಅರ್ಥೈಸಲುಕಷ್ಟವಾಗುತ್ತಿದೆ..
ಇನ್ನೊಂದು ಉದಾಹರಣೆ ನೋಡುವುದಾದರೆ, ಪಂಚಗವ್ಯದ ಶಕ್ತಿ, ಸಾಮರ್ಥ್ಯ ಹಾಗೂ ಆಯಸ್ಸು ಪರಿಣಾಮಕಾರಿಯಾಗಿರ ಬೇಕಾದರೆ, ಅದಕ್ಕೆ ಗಾಳಿಯನ್ನು ಎಷ್ಟು ಸಮಯದ ವರೆಗೆ ಆಡಿಸಬೇಕು ಮತ್ತು ನಿಲ್ಲಿಸಬೇಕು ಎಂಬುದರ ಮೇಲೆ ನಿಂತಿರುತ್ತದೆಯೋ ಹೊರತು, ಸುಮ್ಮನೆ 21 ದಿನಗಳವರೆಗೆ, ದಿನಕ್ಕೆ 3 ಬಾರಿ ದ್ರಾವಣವನ್ನು ತಿರುಗಿಸುವುದರಿಂದಲ್ಲ.
ಇಂತಹ ಸಮಸ್ಯೆಗಳನ್ನು ಉತ್ತರಿಸಲು, ಗಾಂಧೀಜಿ ಸಹಜ ಬೇಸಾಯಾಶ್ರಮಲ್ಲಿ “ಗಾಂಧಿರೈತ ವಿಜ್ಞಾನಕೇಂದ್ರ — ಜೈವಿಕ ಸಂಪನ್ಮೂಲ ಕೇಂದ್ರ” ವನ್ನುತೆರೆದು, ಅದನ್ನುಒಂದಷ್ಟು ರೈತರ ಗುಂಪು ನಡೆಸಿದರೆ ಹೇಗೆ ಎಂದು ಆಲೋಚಿಸಿ, ಒಂದು ಸಣ್ಣ ಪ್ರಯೋಗಾಲಯವನ್ನು ಸ್ಥಾಪಿಸುತ್ತಿದ್ದೇವೆ.
ಈ ಕೇಂದ್ರದಲ್ಲಿ 12 ವಿಭಿನ್ನವಾದ ಉತ್ಪನ್ನಗಳನ್ನು ಉತ್ತಮವಾಗಿ ಉತ್ಪಾದಿಸುವುದರ ಬಗ್ಗೆ ಗಮನವಿರಿಸಲಾಗುತ್ತದೆ. ಅದರಲ್ಲಿ ಕೆಲವು ಆಮ್ಲಜನಕ ಸಹಿತ ಮತ್ತೆ ಕೆಲವು ಆಮ್ಲಜನಕ ರಹಿತ ವಾಗಿರುತ್ತವೆ. ಪಂಚಗವ್ಯ, ಹುಳಿ ಮಜ್ಜಿಗೆ, ಕಂಬುಚ, ಹುಳಗಳು ಹಾಗೂ ಮೊಟ್ಟೆಗಳು ಸೇರಿದಂತೆ ಕೀಟ ನಿಯಂತ್ರಣಕ್ಕಾಗಿ ವಿವಿಧ ಸಸ್ಯಸಾರಗಳು ಮತ್ತುಇನ್ನಿತರ ಕೀಟಗಳ ನಿಯಂತ್ರಣಕ್ಕಾಗಿ ಇದ್ದಿಲು–ಸುಣ್ಣ ಬೆರೆಸಿದ ಧೂಳು, ಮೀನು ಮತ್ತು ಮೊಟ್ಟೆಯ ಅಮೈನೋ ಆಮ್ಲಗಳು, ಬಿಡಿ–500, ಬೋರಾನ್, ಪೊಟಾಷ್ ಮುಂತಾದ ಉತ್ಪನ್ನಗಳನ್ನು ಒಳಗೊಂಡಿದೆ.
ಈ ಉತ್ಪನ್ನಗಳು ಮಣ್ಣಿನರಸಸಾರ(pH) ನಿಯಂತ್ರಣ, ವಿದ್ಯುತ್ ವಾಹಕತೆ (EC) ಹೆಚ್ಚಿಸಿ, ಧನಾತ್ಮಕ ಆವೇಶಗಳ ವಿನಿಮಯ ಸಾಮರ್ಥ್ಯ (CEC) ವನ್ನು ವೃಧ್ದಿಸಿ ಸಸ್ಯಗಳ ಒಟ್ಟಾರೆ ಬೆಳವಣಿಗೆಗೆ ಸಹಾಯವಾಗುತ್ತವೆ. GRV ಏಜೈವಿಕ ಸಂಪನ್ಮೂಲ ಕೇಂದ್ರವು, ಸರಾಸರಿಒಂದು ಹೆಕ್ಟೇರ್ ಭೂಮಿ ಹೊಂದಿರುವ 1400 ರೈತರಿಗೆ ಸೇವೆ ಸಲ್ಲಿಸುವಗುರಿಯನ್ನು ಹೊಂದಿದೆ. ಮೊದಲ ಹಂತದಲ್ಲಿ, ಯೋಜನೆಯ ಸಾಮರ್ಥ್ಯವನ್ನುಕ್ರಿಯಾತ್ಮಕವಾಗಿ ಮೌಲ್ಯಮಾಪನ ಮಾಡಲು 100 ರೈತರನ್ನು ನೋಂದಾಯಿಸಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯದಲ್ಲೇ ನಮ್ಮದು ಮೊದಲ ಪ್ರಯೋಗ: ಕರ್ನಾಟಕ ರಾಜ್ಯದಲ್ಲಿಆಗುತ್ತಿರುವ ಹವಾಮಾನ ಬದಲಾವಣೆಗೆ ಅನುಗುಣವಾದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು, ಈ ನಮ್ಮ ಕೇಂದ್ರವು ಮಹತ್ವದ ಕೊಡುಗೆಯನ್ನು ನೀಡುತ್ತದೆ ಎಂದು ಭಾವಿಸಿ, ರಾಜ್ಯದಲ್ಲಿ ಮೊದಲ ಪ್ರಯೋಗಗಾಂಧಿ ಸಹಜ ಬೇಸಾಯ ಆಶ್ರಮದಾಗಿದೆ.
2025ರ ಮಾರ್ಚ್ 01ರ ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಯುವ “ಗಾಂಧಿರೈತ ವಿಜ್ಞಾನಕೇಂದ್ರ ಹಾಗೂ ಗಾಂಧಿಜೈವಿಕ ಸಂಪನ್ಮೂಲ ಕೇಂದ್ರ”ದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಸಿದ್ದಗಂಗಾ ಮಠದ ಶ್ರೀಶ್ರೀಸಿದ್ದಲಿಂಗ ಮಹಾಸ್ವಾಮೀಜಿಗಳು, ತಿಪಟೂರಿನ ಗುರುಕುಲಾನಂದ ಆಶ್ರಮದ ಸದ್ಗುರು ಶ್ರೀ ಇಮ್ಮಡಿಕರಿ ಬಸವದೇಶಿ ಕೇಂದ್ರ ಮಹಾಸ್ವಾಮೀಜಿಗಳು, ಕೆವಿಕೆ ಹಿರೇಹಳ್ಳಿಯ ಡಾ.ಎನ್.ಲೋಗಾನಂದನ್, ಜೆಡಿಯುರಾಜ್ಯಾಧ್ಯಕ್ಷರಾದ ಮಹಿಮ ಜೆ.ಪಟೇಲ್, ರಾಷ್ಟ್ರೀಯ ಸ್ವಾಭಿಮಾನಿ ಅಂದೋಲನದ ಬಸವರಾಜ ಪಟೇಲ್ ವೀರಾಪುರ, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕೃಷಿ ಆರ್ಥಿಕ ತಜ್ಞರಾದ ತೇಜಸ್ವಿನಿ ಪಟೇಲ್, ಕರ್ನಾಟಕ ಸರಕಾರದ ಕೃಷಿ ಇಲಾಖೆ ಆಯುಕ್ತರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4