ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಉತ್ತಮ ಆರಂಭ ಪಡೆದು, ಪ್ರೇಕ್ಷಕರ ಮನಗೆದ್ದು, ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.ಈ ವೇಳೆ ಗಣೇಶ್ ಅವರು ತಮ್ಮ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ.
ಬಾಸ್ ಪದ ಬಳಕೆ ಇತ್ತೀಚೆಗೆ ಹೆಚ್ಚಿದೆ. ನೆಚ್ಚಿನ ಹೀರೋಗೆ ಅಭಿಮಾನಿಗಳು ಬಾಸ್ ಎಂದು ಕರೆಯುತ್ತಾರೆ. ‘ಬಾಸ್’ ಎಂದರೆ ಅದು ದರ್ಶನ್ ಎಂದು ಅವರ ಫ್ಯಾನ್ಸ್ ಹೇಳುತ್ತಾರೆ. ಸುದೀಪ್, ಯಶ್ ಅಭಿಮಾನಿಗಳು ಕೂಡ ಬಾಸ್ ಪದ ನಮ್ಮ ಹೀರೋಗೆ ಹೊಂದಿಕೆ ಆಗುತ್ತದೆ ಎಂದು ಹೇಳುತ್ತಾರೆ. ಗಣೇಶ್ ಫ್ಯಾನ್ಸ್ ಅವರನ್ನು ಥಿಯೇಟರ್ ಮುಂದೆ ‘ಜಿ ಬಾಸ್’ ಎಂದು ಕರೆದಿದ್ದರು. ‘ಕೃಷ್ಣಂ ಪ್ರಣಯ ಸಖಿ’ ಗೆದ್ದ ಖುಷಿಯಲ್ಲಿ ಈ ರೀತಿ ಕರೆಯುತ್ತಿದ್ದರು.
ಇದಕ್ಕೆ ಗಣೇಶ್ ಬೇಸರ ಹೊಹಾಕಿದ್ದಾರೆ. ‘ನನ್ನನ್ನು ಫ್ಯಾನ್ಸ್ ಜಿ ಬಾಸ್ ಎನ್ನುತ್ತಿದ್ದರು. ದಯವಿಟ್ಟು ಹಾಗೆ ಕರೆಯಬೇಡಿ. ನಾನು ನಿಮ್ಮ ಮನೆಯ ಹುಡುಗ. ನನಗೆ ಗೋಲ್ಡನ್ ಸ್ಟಾರ್ ಎಂದು ಇಟ್ಟಿದ್ದೀರಿ. ಹಾಗೆಯೇ ಕರೆಯಿರಿ ಸಾಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


