ಕಾರವಾರ: ಗಣೇಶನ ಹಬ್ಬ ಒಂದು ಗೂಡಿಸುವ ಪರಂಪರೆಯನ್ನ ಹೊಂದಿದೆ. ಆದರೆ, ಗಣೇಶನ ಹಬ್ಬದ ವಿಚಾರವಾಗಿ ನಡೆದ ಗಲಾಟೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ವರದಿಯಾಗಿದೆ.
ಗಣೇಶ ಚತುರ್ಥಿ ಆಚರಣೆಯ ಹಳೆಯ ಖರ್ಚಿನ ವಿಚಾರಕ್ಕೆ ಇಲ್ಲಿನ ಸಾಯಿಕಟ್ಟಾದಲ್ಲಿ ಶನಿವಾರ ಕುಟುಂಬವೊಂದರ ನಡುವೆ ಕಲಹ ನಡೆದು, ಯುವಕನೊಬ್ಬ ತನ್ನ ಸೋದರ ಸಂಬಂಧಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.
ಶಿರಸಿ ಅಯ್ಯಪ್ಪ ನಗರದ, ಹಾನಗಲ್ನಲ್ಲಿ ಸರ್ವೇಯರ್ ಆಗಿದ್ದ ಸಂದೇಶ ಪ್ರಭಾಕರ ಬೋರಕರ್ (31) ಹತ್ಯೆಯಾದವರು. ಅವರ ಸಹೋದರನ ಪುತ್ರ ಮನೀಷ್ ಬೋರಕರ್ ಹತ್ಯೆಗೈದ ಆರೋಪಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮನೀಷ್ ಸೇರಿ ಅವರದೇ ಕುಟುಂಬದ ಐವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರಸಿ ಮೂಲದ ಒಂದೇ ಕುಟುಂಬಕ್ಕೆ ಸೇರಿದ್ದ ಹಲವರು ಗಣೇಶ ಚತುರ್ಥಿ ಆಚರಣೆಗೆ ಸೇರಿದ್ದ ವೇಳೆ ಹಳೆಯ ಖರ್ಚಿನ ರೂಪಾಯಿ 8 ಸಾವಿರ ಹಣದ ವಿಚಾರವಾಗಿ ಕಲಹ ನಡೆದಿತ್ತು. ಈ ವೇಳೆ ಸಂದೇಶ ಎಂಬುವವರ ಹತ್ಯೆ ನಡೆದಿದೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q