ಹಾಸನ ಜಿಲ್ಲೆಯಲ್ಲಿ ಹಣ್ಣುಗಳಲ್ಲಿ ಬಚ್ಚಿಟ್ಟು ಜೈಲು ಕೈದಿಗಳಿಗೆ ಗಾಂಜಾ ಪೂರೈಕೆಗೆ ಯತ್ನಿಸಿದ ಆರೋಪದ ಮೇಲೆ ಮಂಗಳವಾರ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು 28 ವರ್ಷದ ತಬ್ರೇಜ್, 21 ವರ್ಷದ ವಾಸಿಂ ಮತ್ತು 20 ವರ್ಷದ ರಕೀಬ್ ಎಂದು ಗುರುತಿಸಲಾಗಿದೆ.
ಆರೋಪಿಗಳು ತರಕಾರಿ ಮಾರಾಟ ಮತ್ತು ಸ್ಕ್ರ್ಯಾಪ್ ವ್ಯವಹಾರ ನಡೆಸುತ್ತಿದ್ದರು. ಆರೋಪಿಗಳು ಹಣ್ಣುಗಳಿಗೆ ರಂಧ್ರ ಮಾಡಿ ಒಳಗೆ ಗಾಂಜಾ ತುಂಬಿ ಸ್ಟಿಕ್ಕರ್ ಅಂಟಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲು ಕಟ್ಟಡದ ಹಿಂಭಾಗದಿಂದ ಜೈಲಿನ ಆವರಣಕ್ಕೆ ಗಾಂಜಾ ತುಂಬಿದ್ದ ಸೇಬು ಮತ್ತು ಮೋಸಂಬಿ ಹಣ್ಣುಗಳನ್ನು ಎಸೆಯಲು ಯತ್ನಿಸುತ್ತಿದ್ದಾಗ ಮೂವರು ಸಿಕ್ಕಿಬಿದ್ದಿದ್ದಾರೆ.


