ಹಾವೇರಿ: ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಮಾಡುವುದನ್ನು ಸಾಮಾನ್ಯ. ಆದರೆ ಇಲ್ಲೊಬ್ಬರು ತಮ್ಮ ಪ್ರೀತಿಯ ಸಾಕು ನಾಯಿಗೆ ಸೀಮಂತ ಮಾಡುವ ಮೂಲಕ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಾಗೀಶ್ ನಗರದಲ್ಲಿ ಮನೆಯ ಮಾಲೀಕ ಅಕ್ಷಯ್ ಕುಮಾರ್ ಎಂಬುವವರು ತಮ್ಮ ಸಾಕು ನಾಯಿ ರೂಬಿಗೆ ಕುಂಕುಮ ಇಟ್ಟು,ಹೂ ಹಾಕಿ ಸೀರೆ ಉಡಿಸಿ, ಹೆಂಗೆಳೆಯರು ಆರತಿ ಬೆಳಗಿ, ಸೀಮಂತ ಶಾಸ್ರ ಮಾಡಿದ್ದಾರೆ.
ಗರ್ಭಿಣಿ ಮಹಿಳೆಯರಿಗೆ ಮಾಡುವಂತೆ ಸೀರೆ, ಬಳೆ ಹಾಗೂ ಕುಂಕಮವನ್ನು ಇಟ್ಟು ಅಲಂಕಾರ ಮಾಡಿ ಇಷ್ಟವಾದ ತಿಂಡಿಯನ್ನು ಇಟ್ಟು, ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ಮುಗಿಸಿದ್ದಾರೆ.
ಮಾತ್ರವಲ್ಲದೆ ಸಂಬಂಧಿಕರನ್ನೂ ಕರೆದು ಊಟದ ವ್ಯವಸ್ಥೆಯನ್ನು ಮಾಡಿದ್ದರು. ಗರ್ಭಿಣಿ ಮಹಿಳೆಯರಿಗೆ ಮಾಡುವ ಹಾಗೇ ಸಾಕು ಪ್ರಾಣಿಗೆ ಸೀಮಂತ ಜನರ ಮೆಚ್ಚುಗೆ ಪಡೆದಿದ್ದಾರೆ. ಸದ್ಯ ಸೀಮಂತ ಕಾರ್ಯದ ದೃಶ್ಯಗಳು ಎಲ್ಲಡೆ ವೈರಲ್ ಆಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy