ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ‘ಗರ್ಭ’ ಎಂಬ ಕನ್ನಡ ನಾಟಕವನ್ನು ತುಂಬಾ ಮನೋಜ್ಞವಾಗಿ ಮತ್ತು ಭಾವನಾತ್ಮಕವಾಗಿ ಅಭಿನಯಿಸಿ ಪ್ರದರ್ಶಿಸಿದರು.
ರಂಗ ಚಂದಿರ ಮತ್ತು ಸಮೃದ್ಧಿ ರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು ಜೆ. ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ರಂಗಪತಾಕೆ-2023ರ ಅಡಿ ನಾಟಕ ಪ್ರದರ್ಶಿಸಲಾಯಿತು.
‘ಸರೋಗಸಿ’ ವಿಧಾನದಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯುವ ಕತೆಯುಳ್ಳ ‘ಗರ್ಭ’ ಎಂಬ ನಾಟಕವನ್ನು ವಿದ್ಯಾರ್ಥಿಗಳು ಉತ್ತಮವಾಗಿ ಪ್ರದರ್ಶಿಸಿದರು.


