ಹೆಚ್.ಡಿ.ಕೋಟೆ: ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಪ್ರಾರಂಭವಾಗಲಿದೆ ಎಲ್ಲಾರು ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಮುಂದಾಗಬೇಕು ಎಂದು ವೃತ್ತ ನಿರೀಕ್ಷಕ ಶಬ್ಬೀರ್ ಹುಸೇನ್ ಹೇಳಿದರು.
ಹೆಚ್.ಡಿ.ಕೋಟೆ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಎಲ್ಲಾ ಸಮಾಜದ ಮುಖಂಡರನ್ನು ಹಾಗೂ ನಾಗರಿಕರನ್ನು ಕರೆಯಿಸಿ ಶಾಂತಿ ಸೌಹಾರ್ದತೆಯಿಂದ ಗೌರಿಗಣೇಶ ಹಬ್ಬವನ್ನು ಆಚರಿಸುವಂತೆ ಅವರು ಮನವಿ ಮಾಡಿಕೊಂಡರು.
ಹೆಚ್ ಡಿ ಕೋಟೆಯಲ್ಲಿ ಸರ್ವಜನಾಂಗವು ಜೀವನ ನಡೆಸುತ್ತಿದ್ದಾರೆ ಯಾವುದೇ ಧರ್ಮದ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ ಹಬ್ಬವನ್ನು ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಕೂರಿಸುವವರು ನಿಮ್ಮ ನಿಮ್ಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪೂರ್ವನುಮತಿಯನ್ನು ಪಡೆದು ಕೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಡಿ.ಜೆ. ಸೌಂಡ್ಸ್ ಅಳವಡಿಸಬಾರದೆಂದು ಕಿವಿಮಾತು ಹೇಳಿದರು.
ಗಣಪತಿಯನ್ನು ವಿಸರ್ಜನೆಯನ್ನು ಸಂಜೆ ಆರು ಘಂಟೆಯೊಳಗೆ ನೆರವೇರಿಸಿದರೆ ಉತ್ತಮ ಎಂದು ತಿಳಿಸಿದರಲ್ಲದೇ, ಅಹಿತಕರ ಘಟನೆಗಳು ಸಂಭವಿಸಿದರೆ, ಅಂತವರ ವಿರುದ್ದ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.
ವರದಿ: ಮಲಾರ ಮಹದೇವಸ್ವಾಮಿ


