ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ವಿರುದ್ಧ ಸಹೋದರ ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದ್ದು, ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತ್ರೂ ಗೀತಾ ಗೆಲ್ಲಲ್ಲ ಎಂದು ಗುಡುಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಪರ ಮತಯಾಚಿಸಿ ಮಾತನಾಡಿದ ಅವರು, ಗೀತಾ ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತ್ರೂ ಗೆಲ್ಲಲ್ಲ ಅಂತ ವ್ಯಂಗ್ಯವಾಡಿದರು.
ಡಾ. ರಾಜಕುಮಾರ್ ರವರಿಗೆ ರಾಜಕೀಯದ ಮೇಲೆ ಆಸೆ ಇತ್ತು. ಅದಕ್ಕೆ ಅವರ ಸೊಸೆಯನ್ನು ನಾವು ರಾಜಕೀಯಕ್ಕೆ ತಂದಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಡಾ. ರಾಜ್ ಕುಮಾರ್ ಅವರಿಗೆ ಈ ರೀತಿಯ ಆಸೆ ಇರಲಿಲ್ಲ ಅಂತ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಅವರು ತಂದಿದ್ದು ಬರಗಾಲ. ಚುನಾವಣೆಗೆ ನಿಲ್ಲುವವರ ಮತವೇ ಇಲ್ಲಿ ಇಲ್ಲ. ಚುನಾವಣೆಗೆ ನಿಲ್ಲಬೇಕು ಎಂದು ಗೊತ್ತಿತ್ತು ಅಲ್ವಾ? ಆಗಲಾದರೂ ಸಹ ತಮ್ಮ ಮತವನ್ನು ಬದಲಾಯಿಸಲಿಲ್ಲ. ಈಗ ಅವರ ಮತ ಇಲ್ಲಿ ಇಲ್ಲ, ಇನ್ನೂ ನಮ್ಮ ಮತ ಹೇಗೆ ಬರುತ್ತದೆ ಎಂದು ಕುಮಾರ್ ಬಂಗಾರಪ್ಪ ಪ್ರಶ್ನಿಸಿದರು.
ಗೀತಾರವರು ಇನ್ನೂ ಐದು ಚುನಾವಣೆ ನಡೆಸಿದರು ಸಹ ಅವರು ಗೆಲ್ಲೋದಿಲ್ಲ. ಅವರು ಗ್ರಾಮ ಪಂಚಾಯತ್ ಚುನಾವಣೆಯಿಂದ ಬರಬೇಕಿದೆ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


