ಕೈಗೆಟಕುವ ದರದ ಮತ್ತು ಆರಾಮದಾಯಕ ಬಸ್ ಸೇವೆಗೆ ಹೆಸರುವಾಸಿಯಾದ ಜರ್ಮನಿಯ ಫ್ಲಿಕ್ಸ್‌ಬಸ್, ಬೆಂಗಳೂರಿನಿಂದ ದಕ್ಷಿಣ ಭಾರತದ 33 ಪ್ರಮುಖ ನಗರಗಳಿಗೆ ಬಸ್ ಸೇವೆ ಆರಂಭಿಸಿದೆ.
ಸೆಪ್ಟೆಂಬರ್ 11ರಿಂದ ಕಂಪನಿಯ ಬಸ್‌ಗಳು ಕಾರ್ಯಾಚರಣೆ ಆರಂಭಿಸಲಿದ್ದು, ಮಂಗಳವಾರದಿಂದಲೇ ಬುಕ್ಕಿಂಗ್ ಆರಂಭವಾಗಿದೆ. ಆರಂಭಿಕ ರಿಯಾಯಿತಿ ಎಂದು ಸೆಪ್ಟೆಂಬರ್ 15ರವರೆಗಿನ ಎಲ್ಲ ಬುಕ್ಕಿಂಗ್‌ಗಳಿಗೆ ₹99 ಶುಲ್ಕ ಮತ್ತು ₹5 ಸೇವಾತೆರಿಗೆ ವಿಧಿಸಲಿದೆ.
ಬೆಂಗಳೂರಿನಿಂದ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ವಿಜಯವಾಡ ಸೇರಿ 33 ನಗರಗಳು ಮತ್ತು ಈ ಮಾರ್ಗಗಳಲ್ಲಿ ಬರುವ ಎಲ್ಲಾ ನಗರ-ಪಟ್ಟಣಗಳಿಗೆ ಸೇವೆ ಇರಲಿದೆ. ವಿಶ್ವದಾದ್ಯಂತ 43 ದೇಶಗಳಲ್ಲಿ ಸೇವೆ ಒದಗಿಸುತ್ತಿರುವ ಈ ಕಂಪನಿ, ಇದೇ ಫೆಬ್ರುವರಿಯಲ್ಲಿ ಉತ್ತರ ಭಾರತದಲ್ಲಿ ಸೇವೆ ಆರಂಭಿಸಿತ್ತು. ಈಗ ದಕ್ಷಿಣ ಭಾರತದಲ್ಲಿ ಸೇವೆ ಆರಂಭಿಸಿದೆ. ಕಂಪನಿಯು ತನ್ನ ಬಸ್‌ಗಳು ಮತ್ತು ಇತರ ಖಾಸಗಿ ಬಸ್ ಸೇವಾ ಕಂಪನಿಗಳ ಸಹಯೋಗದಲ್ಲಿ ಸೇವೆ ಒದಗಿಸಲಿದೆ.
ಖಾಸಗಿ ಬಸ್ ನಿರ್ವಾಹಕರ ಸಹಯೋಗದಲ್ಲಿ ಸಂಚಾರ ಜಾಲ ವಿಸ್ತರಿಸಿಕೊಳ್ಳುವ ಯೋಜನೆಯನ್ನು ಫ್ಲಿಕ್ಸ್ ಬಸ್ ಹೊಂದಿದೆ. ಹೆಚ್ಚಿನ ಅನುಕೂಲ, ಸುರಕ್ಷತೆ ಹಾಗೂ ಹೊರೆ ಎನ್ನಿಸದ ದರಗಳ ಮೂಲಕ ಬಸ್ ಪ್ರಯಾಣಿಕರ ವಿಶ್ವಾಸ ಗಳಿಸುವ ಗುರಿ ಹಾಕಿಕೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q